ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಅಧಾರ್ ಕಾರ್ಡ್- ಅಡುಗೆ ಅನಿಲ ಗೊಂದಲ ನಿವಾರಣೆಗೆ ಸರ್ಕಾರಕ್ಕೆ ಆಗ್ರಹ

Lingaraj Badiger
Updated On : 8 Jan 2014, 1:48 am

ಉಡುಪಿ: ಇತ್ತೀಚೆಗೆ ಉಡುಪಿ ಜಿಲ್ಲಾ ಗ್ರಾಹಕರ ವೇದಿಕೆಯು ನಗರದ ಬೋರ್ಡ್ ಹೈಸ್ಕೂಲಿನಲ್ಲಿ ಅಧಾರ್ ಕಾರ್ಡ್ - ಅಡುಗೆ ಅನಿಲ ಗೊಂದಲ ನಿವಾರಣೆಗಾಗಿ ಆಯೋಜಿಸಿದ್ದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಮಹಾಪ್ರಬಂಧಕ ಮತ್ತು ಮಾರಾಟ ಅಧಿಕಾರಿಗಳ ಮುಖಾಮುಖಿ ಕಾರ್ಯಕ್ರಮದಲ್ಲಿ 4 ಠರಾವುಗಳನ್ನು ಅಂಗೀಕರಿಸಲಾಗಿದೆ ಮತ್ತು ಅವುಗಳನ್ನು ಜಾರಿಗೊಳಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗಿದೆ.
 ಅಡುಗೆ ಅನಿಲವನ್ನು, ಗಾಳಿ, ನೀರುಗಳಂತೆ ಜನರ ಜೀವನಕ್ಕೆ ಬೇಕಾಗುವ ಅತ್ಯಗತ್ಯ ಮೂಲಭೂತ ಆವಶ್ಯಕತೆ ಎಂದು ಪರಿಗಣಿಸಬೇಕು ಮತ್ತು ಅಡುಗೆ ಅನಿಲ ಪೂರೈಕೆಯಲ್ಲಿ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲಗಳನ್ನು ಸರ್ಕಾರ ಮತ್ತು ತೈಲ ಕಂಪನಿಗಳು ಜಂಟಿಯಾಗಿ ಕೂಡಿ ಪರಿಹರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಸುಪ್ರೀಂ ಕೋರ್ಟ್ ಹೊರಡಿಸಿರುವ ಆಧಾರ ಸಂಬಂಧದ ಆದೇಶವನ್ನು ಗೌರವ ಪೂರ್ವಕವಾಗಿ ಮತ್ತು ಗಂಭೀರವಾಗಿ ಸರ್ಕಾರ ಮತ್ತು ತೈಲ ಕಂಪನಿಗಳು ಪರಿಗಣಿಸಬೇಕು ಮತ್ತು ಆಧಾರ್ ಕಾರ್ಡ್ ರಹಿತ ಕುಟುಂಬಗಳಿಗೂ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತು ಸಿಗುವಂತಾಗಬೇಕು.
ಅನಿಲ ಸಂಬಂಧಿ ಗ್ರಾಹಕರ ದೂರುಗಳ ಪರಿಹಾರಕ್ಕಾಗಿ ಜಿಲ್ಲಾಮಟ್ಟದಿಂದ ರಾಷ್ಟ್ರಮಟ್ಟದ ತನಕ ದೂರು ಪರಿಹಾರ ವೇದಿಕೆಯ ರಚನೆಯಾಗಬೇಕು. ಅಂತಹ ವೇದಿಕೆಗಳಲ್ಲಿ ಗ್ರಾಹಕ ಸಂಸ್ಥೆಗಳಿಗೆ ಪ್ರಾತಿನಿಧ್ಯ ಕೊಡಬೇಕು.
ಅಡುಗೆ ಅನಿಲದ ಮೇಲೆ ಸರ್ಕಾರ ಸಹಾಯಧನ ಕೊಡುತ್ತಿದ್ದರೂ, ಕೆಲವು ಸಮಾಜ ಘಾತಕ ವ್ಯಕ್ತಿಗಳು ಅಡುಗೆ ಅನಿಲದ ದುರುಪಯೋಗ, ಅವ್ಯವಹಾರ, ಕಾನೂನು ಬಾಹಿರ ಪರಿವರ್ತನೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕರವನ್ನು ವೇದಿಕೆ ಒತ್ತಾಯಿಸಿದೆ.
ಎಲ್ಲಾ ಠರಾವುಗಳನ್ನು ಸಂಬಂಧಿಸಿದ ಸಂಸದರಿಗೆ, ಶಾಸಕರಿಗೆ, ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ವೇದಿಕೆಯ ಸಂಚಾಲಕ ಕೆ. ದಾಮೋದರ ಐತಾಳ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement