ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಅನಿಲ ಬೆಲೆ ಇಳಿಕೆಗೆ ಕಾರ್ಕಳ ಯುವಮೋರ್ಚಾ ಆಗ್ರಹ

Lingaraj Badiger
Updated On : 8 Jan 2014, 1:48 am

ಕಾರ್ಕಳ: ಯಾವುದೇ ಮುನ್ಸೂಚನೆ ನೀಡದೆ ಕೇಂದ್ರ ಸರ್ಕಾರ ಇತ್ತೀಚೆಗೆ ಏಕಾಏಕಿ ಆಟೋ ಗ್ಯಾಸ್ ಸೇರಿದಂತೆ ಸಬ್ಸಿಡಿ ರಹಿತ ಎಲ್‌ಪಿಜಿ ಗ್ಯಾಸ್ ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವ ಗ್ಯಾಸ್ ಬೆಲೆ ಏರಿಕೆ ಮಾಡಿರುವುದನ್ನು ಕಾರ್ಕಳ ಯುವಮೋರ್ಚಾ ಖಂಡಿಸಿದೆ.
ಆಟೋ ಗ್ಯಾಸ್‌ಗೆ ಕೆ.ಜಿ.ಗೆ ರು. 11.10 ಒಮ್ಮೆಲೇ ಏರಿಕೆಯಾಗಿದ್ದು, ಇದರಿಂದಾಗಿ ಈಗಾಗಲೇ ಅಲ್ಪಸ್ವಲ್ಪ ಲಾಭಗಳಿಸುತ್ತಿದ್ದ ಆಟೋ ಚಾಲಕರು ಇದೀಗ ಬೆಲೆ ಏರಿಕೆಯಿಂದಾಗಿ ಸಂಪೂರ್ಣ ನಷ್ಟ ಅನುಭವಿಸುವಂತಾಗಿದೆ.
ಆಟೋ ರಿಕ್ಷಾವನ್ನೇ ನಂಬಿಕೊಂಡು ಸಂಸಾರ ನಡೆಸುತ್ತಿರುವ ಲಕ್ಷಾಂತಾರ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಡಕುಟುಂಬಗಳ ಜೀವನದ ಮೇಲೆ ಚೆಲ್ಲಾಟ ಆಡುತ್ತಿರುವ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಮೋರ್ಚಾ ತಿಳಿಸಿದೆ.
ಕೇಂದ್ರ ಸರ್ಕಾರ ಪದೇ ಪದೇ ಬೆಲೆ ಏರಿಕೆ ಮಾಡುತ್ತಿದ್ದು, ಮಾರುಕಟ್ಟೆಯ ಬೆಲೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ತೈಲ ಬೆಲೆ ಸೇರಿದಂತೆ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು, ಜನಸಾಮಾನ್ಯರು ಪರದಾಡುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ.
ತಕ್ಷಣ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸಡಿಲಗೊಳಿಸಿ ಏರಿಕೆ ಮಾಡಿರುವ ದರ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ರಿಕ್ಷಾ ಚಾಲಕರ ಜೊತೆಗೂಡಿ ಮುಂದಿನ ದಿನಗಳಲ್ಲಿ ಯುವಮೋರ್ಚಾ ನಿರಂತರ ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆ ಎಂದು ಹೇಳಿಕೆಯಲ್ಲಿ ಯುವಮೋರ್ಚಾ ಎಚ್ಚರಿಸಿದೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement