ದೇರಳಕಟ್ಟೆ ಪ್ರಕರಣ; ಗೂಂಡಾ ಕಾಯಿದೆ ಜಾರಿಗೆ ಆಗ್ರಹ
ಉಡುಪಿ: ಇತ್ತೀಚೆಗೆ ನಡೆದ ದೇರಳಕಟ್ಟೆಯ ವಿದ್ಯಾರ್ಥಿಗಳನ್ನು ಅಪಹರಿಸಿ ಅನೈತಿಕ ಕ್ರಿಯೆಯಲ್ಲಿ ತೊಡಗುವಂತೆ ಬೆದರಿಸಿ, ಚಿತ್ರೀಕರಣಗೈಯುವ ಮೂಲಕ ಬ್ಲಾಕ್ಮೇಲ್ ಮಾಡಿದ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮಕೈಗೊಂಡು, ಬಂಧಿತರ ಮೇಲೆ ಗೂಂಡಾ ಕಾಯಿದೆ ಹಾಕುವಂತೆ, ಅಲ್ಲದೆ ಸುರತ್ಕಲ್ ಕೇಂದ್ರವಾಗಿಟ್ಟುಕೊಂಡು ನಿರಂತರವಾಗಿ ನಡೆಯುತ್ತಿರುವ ದನ ಕಳ್ಳರಿಗೂ ಗೂಂಡಾ ಕಾಯಿದೆ ಹಾಕಬೇಕೆಂದು ಪಡುಬೆಳ್ಳೆ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ನಡಿಮನೆ ವಿಶ್ವನಾಥ ಶೆಟ್ಟಿ, ಬೆಳ್ಳೆ ದೊಡ್ಡಮನೆ ಅಜೀತ್ ಶೆಟ್ಟಿ, ಶ್ರೀಮಹಾಲಿಂಗೇಶ್ವರ ದೇವಳದ ಅರ್ಚಕ ಮಧ್ವರಾಜ ಭಟ್, ಪುಂಡರೀಕಾಕ್ಷ ಭಟ್, ದಾಮೋದರ ಸಾಮಗ, ಗಣೇಶ ತಂತ್ರಿ, ಶಂಕರ ಆಚಾರ್ಯ, ರವಿರಾಜ ಆಚಾರ್ಯ, ರಾಘವೇಂದ್ರ ಶೆಟ್ಟಿ, ರಾಜಮೂರ್ತಿ ಭಟ್, ಹರಿಶ್ಚಂದ್ರ ಆಚಾರ್ಯ, ಶಂಕರ ಜೋಗಿ, ಶ್ರೀಶ ಕುಮಾರ್ ಪ್ರಕಟನೆ ಮೂಲಕ ಆಗ್ರಹಿಸಿದ್ದಾರೆ.