ಸುದ್ದಿ ಸಂಕ್ಷೇಪ
28ರಿಂದ ಅತ್ತೂರು ಜಾತ್ರೆ; ಸಭೆ
ಕಾರ್ಕಳ: ಅತ್ತೂರು ಸೈಂಟ್ ಲಾರೆನ್ಸ್ ಚರ್ಚ್‌ನ ವಾರ್ಷಿಕೋತ್ಸವ ಜ.28ರಿಂದ 30ರತನಕ ನಡೆಯಲಿರುವ ಹಿನ್ನೆಲೆಯಲ್ಲಿ ನಿಟ್ಟೆ ಗ್ರಾಪಂ ವತಿಯಿಂದ ಪೂರ್ವಭಾವಿ ಸಭೆ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ವಿವಿಧೆಡೆಗಳಿಂದ ಬರುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಂದ ಭದ್ರತೆಗಾಗಿ ಚರ್ಚ್‌ನ ವತಿಯಿಂದ ಅಲ್ಲಲ್ಲಿ ಸಿಸಿ ಟಿವಿ ಕ್ಯಾಮರಾ ವ್ಯವಸ್ಥೆ ಮಾಡಲಾಗುವುದು. ಮೂರು ದಿನಗಳೂ 24 ಗಂಟೆ ವಿದ್ಯುತ್ ಸರಬರಾಜು, ಅಕ್ರಮ ಮದ್ಯ ಮಾರಾಟ ಸಾಗಾಟ ನಿಷೇಧಗೊಳಿಸಲು ನಿರ್ಧರಿಸಲಾಯಿತು. ಚರ್ಚ್‌ನ ಧರ್ಮಗುರು ರೆ.ಫಾ. ಜಾರ್ಜ್ ಡಿಸೋಜಾ, ಜಿಲ್ಲಾ ಪಂಚಾಯಿತಿ ಸದಸ್ಯ ಕೆದಿಂಜೆ ಸುಪ್ರೀತ್ ಶೆಟ್ಟಿ, ಪುರಸಭಾಧ್ಯಕ್ಷೆ ರೆಹಮತ್, ಶೈಲಜಾ ಡಿ. ಶೆಟ್ಟಿ, ಪಿಡಿಒ ಮೋಹನ್ ಜಾನ್ ಡಿಸಿಲ್ವ ಇದ್ದರು.
ಬುಕ್ ಸ್ಟಾಲ್ ಉದ್ಘಾಟನೆ
ಉಡುಪಿ: ನಗರದ ಗಣೇಶ್ ಟುಟೋರಿಯಲ್ ಕಾಲೇಜಿನಲ್ಲಿ ಆರಂಭಗೊಂಡ ಸೆಕೆಂಡ್ ಹ್ಯಾಂಡ್ ಮಾದರಿ ಬುಕ್ ಸ್ಟಾಲ್ ಜಿಕೆ ಬುಕ್‌ಹೌಸ್‌ನ್ನು ಯು. ಕಮಲಾ ಬೈ ಪ್ರೌಢ ಶಿಕ್ಷಣ ಸಂಸ್ಥೆಯ ಅಧ್ಯಾಪಕ ಕೆ. ಶ್ರೀಧರ ಭಟ್ ಉದ್ಘಾಟಿಸಿದರು. ಮಾತನಾಡಿದ ಶ್ರೀಧರ್ ಭಟ್, ಕೆಲವೊಂದು ವಸ್ತುಗಳು ಒಮ್ಮೆ ಪುಸ್ತಕಗಳನ್ನು ಎಷ್ಟು ಬಾರಿ ಉಪಯೋಗಿಸಿದರೂ ಜನರಿಗೆ ಜೀವನ ಮೌಲ್ಯಗಳನ್ನು ಹೆಚ್ಚಿಸಿಕೊಡುತ್ತದೆ ಎಂದರು. ಸಂಸ್ಥೆಯ ಮುಖ್ಯಸ್ಥ ಟಿ.ಆರ್. ಗೋಪಾಲಕೃಷ್ಣ, ಅಧ್ಯಾಪಕಿ ಸಲ್ಮಾ ಇದ್ದರು. ಸುಮಂತ್ ಭಟ್ ಸ್ವಾಗತಿಸಿದರು.