20ನೇ ಮದ್ಯ ವ್ಯಸನ ವಿಮುಕ್ತಿ ಶಿಬಿರ
ಉಡುಪಿ: ಮುಂಬೈನ ಡಾ.ಎ.ವಿ. ಬಾಳಿಗಾ ಚಾರಿಟೀಸ್, ಕಮಲ್ ಎ. ಬಾಳಿಗಾ ಟ್ರಸ್ಟ್, ದೊಡ್ಡಣಗುಡ್ಡೆಯ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಮತ್ತು ಉಡುಪಿ- ಕರಾವಳಿ ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ಆಶ್ರಯದಲ್ಲಿ 20ನೇ ಮದ್ಯವ್ಯಸನ ವಿಮುಕ್ತಿ ಶಿಬಿರವನ್ನು ಜಿಲ್ಲಾ ನಗಾರಭಿವೃದ್ಧಿ ಕೋಶದ ನಿರ್ದೇಶಕ ಪ್ರಸನ್ನ ಉದ್ಘಾಟಿಸಿದರು. ಪ್ರತಿಯೊಬ್ಬ ವ್ಯಕ್ತಿಯೂ ಮದ್ಯ, ಮಾದಕ ದ್ರವ್ಯ ವ್ಯಸನದಿಂದ ದೂರವಾಗಬೇಕು ಎಂಬ ದೃಢ ನಿರ್ಧಾರ ಮಾಡಿ ವೈದ್ಯರ ನಿರ್ದೇಶನದಂತೆ ಜೀವನ ನಡೆಸಿದರೆ ಮದ್ಯ ವ್ಯಸನದಿಂದ ದೂರವಿರಲು ಸಾಧ್ಯ ಎಂದು ಪ್ರಸನ್ನ ಹೇಳಿದರು. ಅತಿಥಿಗಳಾಗಿ ಮಣಿಪಾಲ ಕೆಎಂಸಿ ಮೆಡಿಸಿನ್ ವಿಭಾಗದ ಪ್ರಚಾರ್ಯ ಡಾ.ಎನ್.ಆರ್. ರಾವ್, ಸಮಾಜ ಸೇವಕ ವಾಲ್ಟರ್ ಸಿರೀಲ್ ಪಿಂಟೋ, ಐಎಂಎ ಕಾರ್ಯದರ್ಶಿ ಡಾ. ಆಶೋಕ ಕುಮಾರ್ ಭಾಗವಹಿಸಿದ್ದರು. ಅತಿಥೇಯ ಸಂಸ್ಥೆಯ ಮಾನಸಿಕ ಆರೋಗ್ಯ ತಜ್ಞ ಡಾ. ವಿರೂಪಾಕ್ಷ ದೇವರಮನೆ ಮತ್ತು ಡಾ. ದೀಪಕ್ ಮಲ್ಯ ಇದ್ದರು. ಡಾ.ಎ.ವಿ. ಬಾಳಿಗಾ ಸಮೂಹ ಸಂಸ್ಥೆಯ ನಿರ್ದೇಶಕ ಡಾ.ಪಿ.ವಿ. ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ 8 ಮಂದಿ ಮದ್ಯವಿಮುಕ್ತರನ್ನು ಸನ್ಮಾನಿಸಲಾಯಿತು. ಆತಿಥಿಗಳನ್ನು ಆಸ್ಪತ್ರೆಯ ಮನಶಾಸ್ತ್ರಜ್ಞ ನಾಗರಾಜ ಮೂರ್ತಿ ಸ್ವಾಗತಿಸಿದರು, ಆಸ್ಪತ್ರೆಯ ಆಪ್ತಸಲಹೆಗಾರ ಜೀವನ ವಿಜಯ ಲೂಯಿಸ್ ವಂದಿಸಿದರು. ಅಮಿತ ಮತ್ತು ಸೌಮ್ಯ ನಿರೂಪಿಸಿದರು.