ಕಾಣಿಯೂರು ಶ್ರೀಗೆ ಸನ್ಮಾನ
ಉಡುಪಿ: ಜ.18ರಂದು ಪರ್ಯಾಯ ಸರ್ವಜ್ಞ ಪೀಠಾರೋಹಣ ನಡೆಸಲಿರುವ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು ಗುರುವಾರ ಉಡುಪಿ ಪುರಪ್ರವೇಶ ಮಾಡಿದ ಸಂದರ್ಭ ರಥಬೀದಿಯಲ್ಲಿ ನಡೆದ ಪೌರಸನ್ಮಾನ ಕಾರ್ಯಕ್ರಮದಲ್ಲಿ ಉಡುಪಿ ಕಲಾಭಿಮಾನಿಗಳ ಪರವಾಗಿ ಕಲಾವೃಂದ ವತಿಯಿಂದ ಗೌರವಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಅಂಶುಮಾಲಿ ಶ್ರೀಪಾದರಿಗೆ ಹೂಹಾರ ಹಾಕಿ ಅಭಿನಂದನಾ ಪತ್ರ ಸಲ್ಲಿಸಿದರು. ಜೊತೆ ಕಾರ್ಯದರ್ಶಿ ಕೆ. ಶ್ರೀಪತಿ ತಂತ್ರಿ, ಕಾರ್ಯದರ್ಶಿ ಬಿ. ಪದ್ಮನಾಭ ಭಟ್, ಸದಸ್ಯರಾದ ಶ್ರೀನಿವಾಸ ರಾವ್ ಇದ್ದರು.
ಪರ್ಯಾಯ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಶಾಸಕರಾದ ಪ್ರಮೋದ್ ಮಧ್ವರಾಜ್, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ರಘುಪತಿ ಭಟ್, ನಗರಸಭಾಧ್ಯಕ್ಷ ಯುವರಾಜ್ ಇದ್ದರು.