ತಾರಾ ಉಮೇಶ್ಗೆ ಸಾಹಿತ್ಯ ಮಂದಾರ ಬಿರುದು
ಉಡುಪಿ: ಮಲ್ಪೆ- ಕೊಡವೂರು ರೋಟರಿಯ ಪದಾಧಿಕಾರಿಗಳ ಪದಗ್ರಹಣದ ನಂತರ 27 ಭಾನುವಾರ ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ 27 ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಅದರಲ್ಲಿ ಗೃಹಸನ್ಮಾನ ಕಾರ್ಯಕ್ರಮದಲ್ಲಿ ಚುಟುಕು ಸಾಹಿತಿ ತಾರಾ ಉಮೇಶ್ ಆಚಾರ್ಯ ಅವರನ್ನು ಸಾಹಿತ್ಯ ಮಂದಾರ ಬಿರುದು ನೀಡಿ ರೋಟರಿ ಜಿಲ್ಲಾ ಗವರ್ನರ್ ಎಸ್. ಗುರುರಾಜ್ ಅಭಿನಂದಿಸಿದರು.
ಈ ಸಂದರ್ಭದಲ್ಲಿ ರೋಟರಿ ಸಹಾಯಕ ಗವರ್ನರ್ ಮಹೇಶ್ ಕುಮಾರ್ ಎಂ, ಅದ್ಯಕ್ಷೆ ಪೂಣಿಂಮಾ ಜನಾರ್ದನ್, ಕಾರ್ಯದರ್ಶಿ ಜನಾರ್ದನ ಕೊಡವೂರು, ಪುಷ್ಪಲತಾ ಗುರುರಾಜ್, ರೋಟರಿ ಸದಸ್ಯರು, ಉಮೇಶ್ ಆಚಾರ್ಯ ಮತ್ತು ಅವರ ಮನೆಯವರು, ಮಂಜೂಷಾ ಚಂಡೆ ಬಳಗದ ರಮಾ ರಾವ್, ಸರೋಜ ಶೆಟ್ಟಿಗಾರ್ ಉಪಸ್ಥಿತರಿದ್ದರು.