ಪರ್ಯಾಯ ಪ್ರಯುಕ್ತ ಮದ್ಯ ನಿಷೇಧ
ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಜ.17 ಮತ್ತು 18ರಂದು ಪರ್ಯಾಯೋತ್ಸವ ನಡೆಯಲಿದ್ದು, ಈ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಉಡುಪಿ ಸುತ್ತಮುತ್ತಲಿನ 6 ಗ್ರಾಪಂಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಅಂಬಲಪಾಡಿ, ಕಡೆಕಾರು, ಮಲ್ಪೆ, ಸಂತೆಕಟ್ಟೆ, ಉದ್ಯಾವರ ಮತ್ತು ಕಟಪಾಡಿ ಗ್ರಾಪಂ ಪ್ರದೇಶಗಳ ವ್ಯಾಪ್ತಿಯಲ್ಲಿ ಜ.17ರಂದು ಬೆಳಗ್ಗೆ 6ರಿಂದ ಜ.18ರ ಸಂಜೆ 6 ಗಂಟೆವರೆಗೆ ಎಲ್ಲ ರೀತಿಯ ಮದ್ಯದಂಗಡಿಗಳನ್ನು ಮತ್ತು ಯಾವುದೇ ಹೊಟೇಲ್ಗಳಲ್ಲಿ, ನಾನ್ಪ್ರೊಪೈಟರಿ ಕ್ಲಬ್ಗಳಲ್ಲಿ, ಸ್ಟಾರ್ ಹೊಟೇಲ್, ಕ್ಲಬ್ಗಳಲ್ಲಿ ಮಾರಾಟ, ಸರಬರಾಜು ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು ಆದೇಶ ಹೊರಡಿಸಿದ್ದಾರೆ.