ಬಿಪಿಎಲ್ ಕಾರ್ಡ್ಗೆ ಕುಚ್ಚಲಕ್ಕಿ ವಿತರಣೆ
ಉಡುಪಿ: ಇಲ್ಲಿನ ಉಪ್ಪೂರು ವ್ಯವಸಾಯ ಸಹಕಾರಿ ಸಂಘದ ಸಭಾಂಗಣದಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ಪ್ರಥಮ ಬಾರಿ ಕುಚ್ಚಲಕ್ಕಿ ನೀಡುವುದರ ಮೂಲಕ ಈ ಯೋಜನೆಯನ್ನು ಶಾಸಕ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು.
ಕಳೆದ 7 ವರ್ಷಗಳಲ್ಲಿ ಹಿಂದಿನ ಸರ್ಕಾರಗಳು ಒಂದೇ ಒಂದು ಬಿಪಿಎಲ್ ಕಾಡ್ ನೀಡಿರಲಿಲ್ಲ. ಆದರೆ, ತಾನು ಶಾಸಕನಾದ ಮೇಲೆ 7 ತಿಂಗಳುಗಳಲ್ಲಿ 7000 ಬಿಪಿಎಲ್ ಕುಟುಂಬಗಳನ್ನು ಗುರುತಿಸಿ ಕಾರ್ಡ್ಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭ ಹಾವಂಜೆ ಮತ್ತು ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 28 ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ಗಳನ್ನು ವಿತರಿಸಲಾಯಿತು.
ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್. ರಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ಮಲ್ಲಿಕಾ ಅಶೋಕ್, ತಾ.ಪಂ. ಸದಸ್ಯರಾದ ವೆರೋನಿಕಾ ಕರ್ನಲಿಯೋ, ಉಮೇಶ್ ನಾಯ್ಕ್, ಆಹಾರ ಇಲಾಖೆಯ ಉಪನಿರ್ದೇಶಕ ಕೆ.ಪಿ. ಮಧುಸೂದನ್, ವ್ಯ.ಸೇ.ಸ. ಸಂಘದ ಉಪಾಧ್ಯಕ್ಷ ಬಿ. ಕೃಷ್ಣಪ್ಪ ಪೂಜಾರಿ, ನಿರ್ದೇಶಕರಾದ ಹೂವಯ್ಯ ಸೇರ್ವೆಗಾರ್, ಸಂಜೀವ ಸುವರ್ಣ ಪಾಲ್ಗೊಂಡರು.
ತಾ.ಪಂ. ಮಾಜಿ ಸದಸ್ಯ ಸಂಜೀವ ಪೂಜಾರಿ, ಗ್ರಾ.ಪಂ. ಸದಸ್ಯರಾದ ಲೋಕೇಶ್ ಮೆಂಡನ್, ರಮೇಶ್ ಕರ್ಕೇರಾ ಮತ್ತು ಪ್ರಶಾಂತ್ ಮಾಯಾಡಿ ಸ್ಥಳೀಯರಾದ ಶ್ರೀನಿವಾಸ್ ರಾವ್, ದಯಾನಂದ ಪೂಜಾರಿ, ಸತೀಶ್ ಸಾಲಿಯಾನ್, ವೆಲೆಂಟಿನ್ ಡಿ' ಸೋಜ, ಅಂಗನವಾಡಿ ಕಾರ್ಯಕರ್ತೆಯರು ಆಹಾರ ವಿಭಾಗ ಮೇಲ್ವಿಚಾರಕರು ಹಾಗೂ ಉಪ್ಪೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.