ಕಾಣಿಯೂರು ಶ್ರೀ ಕ್ಷೇತ್ರ ಸಂಚಾರ
ಉಡುಪಿ: ಭಾವಿ ಪರ್ಯಾಯ ಕಾಣಿಯೂರು ವಿದ್ಯಾವಲ್ಲಭ ತೀರ್ಥರು ಉಡುಪಿ ಕ್ಷೇತ್ರ ಸಂಚಾರದಲ್ಲಿದ್ದು, ಪೆರಂಪಳ್ಳಿ ಶ್ರೀಮಹಾಲಿಂಗೇಶ್ವರ, ತಾಂಗೋಡು ಶ್ರೀಸುಬ್ರಹ್ಮಣ್ಯ, ಮಲ್ಲಂಪಳ್ಳಿ ಶ್ರೀವಿಷ್ಣುಮೂರ್ತಿ, ಚಕ್ರತೀರ್ಥ ಉಮಾಮಹೇಶ್ವರ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಪೆರಂಪಳ್ಳಿ ಮಹಾಲಿಂಗೇಶ್ವರ ದೇವಾಲಯದ ಮೊಕ್ತೇಸರ ಪಿ.ಎನ್. ಪ್ರಸನ್ನಕುಮಾರ್ ರಾವ್, ತಾಂಗೋಡು ದೇವಳ ಅರ್ಚಕ ರಾಘವೇಂದ್ರ ಭಟ್, ಮಲ್ಲಂಪಳ್ಳಿ ದೇವಳ ಅರ್ಚಕ ಅಚ್ಯುತ ಬಲ್ಲಾಳ್, ಶ್ರೀನಿವಾಸ ಬಲ್ಲಾಳ್, ವಾಸುದೇವ ಬಲ್ಲಾಳ್, ಚಕ್ರತೀರ್ಥ ದೇವಳ ಮುಖ್ಯಸ್ಥರಾದ ಪದ್ಮನಾಭ ಆಚಾರ್ಯ, ರುದ್ರಯ್ಯ ಆಚಾರ್ಯ, ಮುರಹರಿ ಆಚಾರ್ಯ ಮತ್ತಿತರರು ಇದ್ದರು.
ವಾಸುದೇವ ಭಟ್ ಪೆರಂಪಳ್ಳಿ ಈ ಕ್ಷೇತ್ರ ಸಂಚಾರ ಕಾರ್ಯಕ್ರಮ ಸಂಯೋಜಿಸಿದ್ದರು.