ವಿದ್ಯಾರ್ಥಿಗಳಿಗೆ ತರಬೇತಿ
ಕೋಟ: ಎಲ್ಲಾ ಶಾಲೆಗಳಲ್ಲಿ ಪರೀಕ್ಷಾಪೂರ್ವ ತಯಾರಿ ಶಿಬಿರ ಕಾರ್ಯಕ್ರಮಗಳು ಆಯೋಜನೆಗೊಳ್ಳಬೇಕು. ಆಗ ಮಾತ್ರ ವಿದ್ಯಾರ್ಥಿಗಳು ರ್ಯಾಂಕ್ ತೆಗೆಯಲು ಅನುಕೂಲವಾಗುತ್ತದೆ ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಹೇಳಿದರು. ಅವರು ಬುಧವಾರ ಕೋಟ ಸಂಯುಕ್ತ ಪ್ರೌಢಶಾಲೆಯಲ್ಲಿ ಮೊಗವೀರ ಯುವ ಸಂಘ ಕೋಟ, ಮೊಗವೀರ ಮಹಿಳಾ ಸಂಘ, ಗೀತಾನಂದ ಫೌಂಡೇಶನ್ ಹಾಗೂ ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಮಣೂರು ಪಡುಕೆರೆ ಸಂಯೋಗದೊಂದಿಗೆ ಹಮ್ಮಿಕೊಳ್ಳಲಾದ ಎಸ್.ಎಲ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಪೂರ್ವ ತಯಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಮೊಗವೀರ ಯುವ ಸಂಘದ ಅಧ್ಯಕ್ಷ ಸುರೇಶ ಕೆ. ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ವಿವೇಕ ಬಾಲಕೀಯರ ಪ್ರೌಢಶಾಲೆಯ ಸಹ ಶಿಕ್ಷಕ ನರೇಂದ್ರ ಕುಮಾರ್ ಕೋಟ, ಮುಖ್ಯ ಅತಿಥಿಗಳಾಗಿ ಮೋಗವೀರ ಯುವ ಸಂಘದ ಜಿಲ್ಲಾಧ್ಯಕ್ಷ ಜಯ ಸಿ. ಕೋಟ್ಯಾನ್, ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ಗೋಪಾಲ್ ಮತ್ತಿತರರು ಇದ್ದರು.
ಉತ್ತಮ ಶಿಕ್ಷಕರ ಪಡೆಯುವುದು ಸವಾಲು: ಡಾ. ಮೋಹನ್ ಆಳ್ವ
ಕಾರ್ಕಳ: ಉತ್ತಮ ಶಿಕ್ಷಕರನ್ನು ಪಡೆಯುವುದು ಇಂದು ಸವಾಲಿನ ಕೆಲಸವಾಗಿದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅಭಿಪ್ರಾಯಪಟ್ಟರು.
ಕಾಂತವರ ಪ್ರಕೃತಿ ಗ್ರೂಫ್ ಆಫ್ ಇನ್ಸ್ಟಿಟ್ಯೂಟ್ ವಿದ್ಯಾಸಂಸ್ಥೆಯ ಎರಡನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಡುಪಿ ಜಿಲ್ಲಾ ಉಪನಿರ್ದೇಶಕ ಎಸ್.ಎಸ್. ಶಿಂಧಾ, ಉಡುಪಿ ಸ್ನಾತಕೋತ್ತರ ಕೇಂದ್ರದ ಸರ್ಕಾರಿ ಕಾಲೇಜಿನ ಕನ್ನಡ ಮುಖ್ಯಸ್ಥ ಡಾ. ಗಣನಾಥ ಎಕ್ಕಾರು, ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ವಕೀಲ ಶಾಮತಿಪ್ರಸಾದ ಹೆಗ್ಡೆ ಮಾತನಾಡಿದರು.
ಎಜ್ಯುಕೇಶನ್ ಟ್ರಸ್ಟ್ನ ಚೇರ್ಮನ್ ಕ್ರಿಸ್ಪವ್ ಜರಾಲ್ಡ್ ಕ್ರಾಸ್ತ, ಕಾರ್ಕಳ ಎಜ್ಯಕೇಶನ್ನ ಕಾರ್ಯದರ್ಶಿ ಎಲಿನ್ ಕ್ರಾಸ್ತ, ಪ್ರಾಂಶುಪಾಲ ರಾಘವೇಂದ್ರ ಕಿಣಿ ಇದ್ದರು.
ಸಂಸ್ಥೆಯ ಆಡಳಿತಾಧಿಕಾರಿ ಅಶೋಕ್ ಸ್ವಾಗತಿಸಿದರು. ಉಪನ್ಯಾಸಕರಾದ ಶೈಲಜಾ, ಪ್ರಮೀಳಾ ಜೈನ್, ಅರುಣ್ ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಉಷಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ವಿನಾಯಕ್ ಜೋಗ್ ವಂದಿಸಿದರು.