ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ವಿವಾದಗಳಿಲ್ಲದೆ ಪರ್ಯಾಯೋತ್ಸವ: ಕಾಣಿಯೂರು ಶ್ರೀ

Vishwanath S
Updated On : 17 Jan 2014, 12:36 pm

ಉಡುಪಿ: ಯಾವುದೇ ವಿವಾದಗಳಿಲ್ಲದೆ ನಾಳೆ ತಮ್ಮ ಪರ್ಯಾಯೋತ್ಸವ ನಡೆಯಲಿದೆ. ಮಾತ್ರವಲ್ಲ ಮುಂದಿನ 2 ವರ್ಷಗಳ ತಮ್ಮ ಪರ್ಯಾಯಾವಧಿ ವಿವಾದ ಮುಕ್ತವಾಗಿರಲಿದೆ ಎಂದು ಶನಿವಾರ ಮುಂಜಾನೆ ಪರ್ಯಾಯ ಪೀಠಾರೋಹಣ ನಡೆಸಲಿರುವ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ಪರ್ಯಾಯದ ಕುರಿತ ಮೊದಲ ಸುದ್ದಿಗೋಷ್ಠಿ ನಡೆಸಿದ ಶ್ರೀಗಳು, ಯಾವುದೇ ಮಠಾಧೀಶರ ಮನಸ್ಸನ್ನು ನೋಯಿಸುವ ಉದ್ದೇಶ ತಮಗಿಲ್ಲ. ಉಡುಪಿಯ ಉಳಿದೆಲ್ಲ ಮಠಾಧೀಶರು ಮತ್ತು ತಮ್ಮ ನಡುವೆ ಬಾಂಧವ್ಯ ಬಹಳ ಚೆನ್ನಾಗಿದೆ. ಆದ್ದರಿಂದ ಯಾವುದೇ ಸಮಸ್ಯೆಗಳಾಗುವುದಿಲ್ಲ ಎಂದರು. ಈ ಬಾರಿಯ ಪರ್ಯಾಯ ಮೆರವಣಿಗೆಯ ಸಂದರ್ಭದಲ್ಲಿ ಭಕ್ತರು ಹೊರುವ ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳದೆ, ಪಲ್ಲಕ್ಕಿಯನ್ನು ವಾಹನದಲ್ಲಿಟ್ಟು ಮಠಾಧೀಶರು ಅದರಲ್ಲಿ ಕುಳಿತು ಕೃಷ್ಣ ಮಠಕ್ಕೆ ಬರುವ ಆಶಯವನ್ನು ಪೇಜಾವರ ಶ್ರೀಗಳು ವ್ಯಕ್ತಪಡಿಸಿದ್ದಾರೆ. ತಮ್ಮದೂ ಅದೇ ಆಶಯವಾಗಿದೆ. ಇದಕ್ಕೆ ಇತರ ಮಠಾಧೀಶರೂ ಸಿದ್ಧರಿದ್ದಾರೆ ಎಂದರು.
ಶೀರೂರು ಶ್ರೀಗಳು ಒಪ್ಪುತ್ತಾರೆ: ಶೀರೂರು ಶ್ರೀಗಳು ವಾಹನದಲ್ಲಿಟ್ಟ ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳುವುದಕ್ಕೆ ಸ್ವಲ್ಪ ಅಸಮಾಧಾನ ವ್ಯಕ್ತಪಡಿಸಿರುವುದು ಮಾಧ್ಯಮಗಳಿಂದ ತಮಗೆ ತಿಳಿಯಿತು. ಅವರೊಂದಿಗೆ ಮಾತುಕತೆ ನಡೆಸುತ್ತೇನೆ. ಅವರು ಖಂಡಿತಾ ಇತರ ಸ್ವಾಮೀಜಿಗಳಂತೆ ವಾಹನದಲ್ಲಿಟ್ಟ ಪಲ್ಲಕ್ಕಿಯಲ್ಲಿಯೇ ಕುಳಿತು ಬರುತ್ತಾರೆ ಎನ್ನುವ ವಿಶ್ವಾಸ ತಮಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement