ಪ್ರತಿಭಾ ಪುರಸ್ಕಾರ, ಪರೀಕ್ಷಾ ಪೂರ್ವ ತರಬೇತಿ, ಉದ್ಯೋಗ ಮಾಹಿತಿ
ಕಾರ್ಕಳ: ಇಲ್ಲಿನ ಬಂಡಿಮಠದ ರಾಮಕ್ಷತ್ರೀಯ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಹಾಗೂ ಉದ್ಯೋಗ ಮಾಹಿತಿ ಕಾರ್ಯಕ್ರಮ ಶ್ರೀ ರಾಮ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಆರಕ್ಷಕ ಅಣ್ಣಾಮಲೈ ಕಾರ್ಯಕ್ರಮ ಉದ್ಘಾಟಿಸಿದರು. ರಾಮಕ್ಷತ್ರೀಯ ಸಂಘದ ಅಧ್ಯಕ್ಷ ಪ್ರಸನ್ನ ಕೆ.ಬಿ. ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಪೊಲೀಸ್ ಆರಕ್ಷಕ ಸಂತೋಷ್ ಕುಮಾರ್, ನಕ್ಸಲ್ ನಿಗ್ರಹ ಪಡೆಯ ಕಮಾಂಡೆಂಟ್ ಎಚ್.ಎಸ್. ಸುದರ್ಶನ್, ಅಬಕಾರಿ ಉಪಾರಕ್ಷಕ ವಿನೋದ್ ಕುಮಾರ್, ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಅನಂತಪದ್ಮನಾಭ, ದ.ಕ. ಜಿಲ್ಲಾ ವಿಶೇಷ ವಿಭಾಗದ ಪೊಲೀಸ್ ನಿರೀಕ್ಷಕ ಸವಿತ್ರ ತೇಜ, ಕಾರ್ಕಳ ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರಮೋದ್ ಕುಮಾರ್ ಪಿ., ಟ್ರಸ್ಟ್ನ ಅಧ್ಯಕ್ಷ ಪಾರ್ಥ ಸಾರಥಿ ಇದ್ದರು.