ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

'ಮಾನವ ಹಕ್ಕು' ವಿಶೇಷ ಉಪನ್ಯಾಸ

Rashmi Kasaragodu
Updated On : 18 Jan 2014, 1:38 am

ಉಡುಪಿ: ಮೂಡುಬೆಳ್ಳೆ ಸಂತ ಲಾರೆನ್ಸ್ ಪದವಿ ಕಾಲೇಜು ಮಾನವ ಹಕ್ಕುಗಳ ಸಂಘದ ವತಿಯಿಂದ ಮಾನವ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಪ್ರಾಂಶುಪಾಲೆ ಸರಿತಾ ಡಿ'ಸೋಜ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ನಡೆಯಿತು. ಶಿರ್ವ ಸಂತ ಮೇರಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಪದ್ಮನಾಭ ಭಟ್ ಮಾನವ ಹಕ್ಕುಗಳ ಸಾಧ್ಯತೆಗಳ ಕುರಿತು ಮಾತನಾಡಿದರು. ಉಪನ್ಯಾಸಕ ಸುಚಿತ್ ಕೋಟ್ಯಾನ್, ನಾಗೇಶ್ ಇದ್ದರು.
ಜೇಸಿಐ: ಪದಗ್ರಹಣ
ಕೋಟ: ಜೇಸಿಐ ಕೋಟ ಸಿಟಿಯ 2014ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಲ್ಲಿನ ಡಾ.ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಇತ್ತೀಚೆಗೆ ನಡೆಯಿತು. ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಕೆ. ಸುಧೀಂದ್ರ ಐತಾಳ್, ಕಾರ್ಯದರ್ಶಿಯಾಗಿ ಸುಜಾತ ಬಾಯರಿ, ಜೇಸಿರೆಟ್  ಅಧ್ಯಕ್ಷೆಯಾಗಿ ಶ್ರೀಲಕ್ಷ್ಮೀ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಆನಂದ ಸಿ. ಕುಂದರ್, ಜಗದೀಶ್ ಕೆಮ್ಮಣ್ಣು, ಕೋಟತಟ್ಟು ಪಂಚಾಯಿತಿ ಅಧ್ಯಕ್ಷೆ ಶೋಭ, ನಿವೃತ್ತ ಪ್ರಾಂಶುಪಾಲ ರಾಘವೇಂದ್ರ ಭಟ್, ವಲಯ ಉಪಾಧ್ಯಕ್ಷ ಎನ್.ಮಿತ್ರ ಕುಮಾರ್, ಪೂರ್ವಾಧ್ಯಕ್ಷ ಕೇಶವ ಆಚಾರ್ ಇದ್ದರು.
ಬಿ. ಮೊಹಿದಿನ್ ಬ್ಯಾರಿ ಆಯ್ಕೆ
ಬ್ರಹ್ಮಾವರ: ಬಾರ್ಕೂರಿನ ಮಾಲಿಕ್ ಬಿನ್ ದೀನಾರ್ ಜುಮಾ ಮಸೀದಿಯ ಆಡಳಿತ ಸಮಿತಿಯ 2014-15ನೇ ಸಾಲಿನ ನೂತನ ಅಧ್ಯಕ್ಷರಾಗಿ ಬಿ. ಮೊಹಿದಿನ್ ಬ್ಯಾರಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ನಝೀರ್ ಹೊಸಾಳ, ಕಾರ್ಯದರ್ಶಿಯಾಗಿ ಎಂ.ಎ. ಖಾದರ್, ಸಹ ಕಾರ್ಯದರ್ಶಿಯಾಗಿ ಸಾದಿಕ್, ಕೋಶಾಧಿಕಾರಿಯಾಗಿ ಮೊಹಿದಿನ್ ಧರ್ಮಸಾಲೆ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಎಚ್.ಪಿ. ಸುಲೈಮಾನ್, ಕುಂಞ ಅಹಮ್ಮದ್, ನಾಸೀರ್, ಟಿ. ಮುಹಿಯುದ್ದಿ, ಅನ್ಸರ್, ಅಬ್ದುಲ್ ಖಾದರ್, ಅಬ್ದುಲ್ಲ, ಅಬ್ದುಲ್ ಅಝೀಝ್, ಗೌರವಾಧ್ಯಕ್ಷರಾಗಿ ಖಾಸಿಂ ಬಾರ್ಕಾರು, ಸಲಹೆಗಾರರಾಗಿ ಸೈಯ್ಯದ್ ಆಲವಿ ಸಖಾಫಿ, ಹಾಜಿ ಇಸ್ಮಾಯಿಲ್ ಆಯ್ಕೆಯಾದರು.
ರಸ್ತೆ ಉದ್ಘಾಟನೆ
ಕಾರ್ಕಳ: ಮುಂಡ್ಕೂರು ಗ್ರಾಮ ಪಂಚಾಯಿತಿ ಕಚೇರಿಗೆ ಸಂಪರ್ಕ ಕಲ್ಪಿಸುವ ಕಾಂಕ್ರಿಟ್ ರಸ್ತೆಯನ್ನು ಶಾಸಕ ವಿ. ಸುನಿಲ್ ಕುಮಾರ್ ಉದ್ಘಾಟಿಸಿದರು. ಮುಂಡ್ಕೂರು ಗ್ರಾ.ಪಂ. ಅಧ್ಯಕ್ಷ ಸತ್ಯಶಂಕರ ಶೆಟ್ಟಿ, ಉಪಾಧ್ಯಕ್ಷೆ ಗಿರಿಜಾ ಪೂಜಾರ್ತಿ, ಮಾಜಿ ಅಧ್ಯಕ್ಷ ರತ್ನಾ ಕುಲಾಲ್, ಸದಸ್ಯರಾದ ಭಾಸ್ಕರ ಎಂ. ಶೆಟ್ಟಿ, ಕರಿಯ ಪೂಜಾರಿ, ನಾಗೇಶ ಮೂಲ್ಯ, ರವೀಂದ್ರ ಶೆಟ್ಟಿ, ಗೋಪಾಲ ಮೂಲ್ಯ, ಪಿಡಿಒ ಶಶಿಧರ ಆಚಾರ್ಯ, ಬಿಜೆಪಿ ಮುಂದಾಳು ಅಶೋಕ್ ಶೆಟ್ಟಿ, ಗ್ರಾಮದ ಗಣ್ಯರಾದ ಗಣನಾಥ ಶೆಟ್ಟಿ, ಡಾ.ಪಿ.ಬಿ. ಆಳ್ವ, ಯಶವಂತ ಆಚಾರ್ಯ ರಘುವೀರ ಶೆಣೈ, ವಿಶ್ವನಾಥ ಶೆಟ್ಟಿ, ಗಣೇಶ್ ರಾವ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement