ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಸುದ್ದಿ ಸಂಕ್ಷೇಪ

Mainashree
Updated On : 22 Jan 2014, 2:25 am

ಗುಜ್ಜಾಡಿ: ಇಂದಿನಿಂದ ನಾಗದೇವರ ಪುನಃಪ್ರತಿಷ್ಠೆ,
ಬ್ರಹ್ಮಕಲಶೋತ್ಸವ
ಗಂಗೊಳ್ಳಿ: ಗುಜ್ಜಾಡಿ ಶ್ರೀ ಬ್ರಹ್ಮಬಂಟರ ಕೋಟಿ ಚೆನ್ನಯ, ಪಂಜುರ್ಲಿ, ಹಾಗುಳಿ- ಪರಿವಾರ ದೈವಗಳ ಮತ್ತು ಶ್ರೀ ನಾಗದೇವರ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ 22ರಿಂದ 24ರ ತನಕ ನಡೆಯಲಿದೆ. ವೇದಮೂರ್ತಿ ಕೋಟ ಕೆ. ಚಂದ್ರಶೇಖರ ಸೋಮಯಾಜಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. 22ರಂದು ಬೆಳಗ್ಗೆ 6 ಗಂಟೆಯಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿದ್ದು, ರಾತ್ರಿ 11 ಗಂಟೆಗೆ ಪ್ರತಿಷ್ಠೆ, ಜೀವಾಕುಂಭಾಬಿಷೇಕ, ಮಹಾಮಂಗಳಾರತಿ ನಡೆಯಲಿದೆ. 23ರಂದು ನಾಗದೇವರ ಪ್ರತಿಷ್ಠೆ, ಕಲಾಭಿವೃದ್ಧಿ ಹೋಮ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ ನಡೆಯಲಿದೆ. 24ರಂದು ಬೆಳಗ್ಗೆ 7 ಗಂಟೆಗೆ ಬ್ರಹ್ಮಕಲಶ ಪೂಜೆ, ಕಲಶಾಭಿಷೇಕ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಮಧ್ಯಾಹ್ನ 1.30ಕ್ಕೆ ಮಹಾ ಅನ್ನಸಂತರ್ಪಣೆ, ಸಂಜೆ 7 ಗಂಟೆಗೆ ಕಾಯ್ದ ಪೂಜೆ ಹಬ್ಬ (ಅಗ್ಲ ಪೂಜೆ) ನಡೆಯಲಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ಎಡನೀರು ಮೇಳದವರಿಂದ ಯಕ್ಷಗಾನ ನಡೆಯುಲಿದೆ. 24ರಂದು ಪೂರ್ವಾಹ್ನ 10.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಉದ್ಯಮಿ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ನಾರಾಯಣ ಟಿ. ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ವಿನಯಕುಮಾರ್ ಸೊರಕೆ ಧಾರ್ಮಿಕ ಸಭೆ ಉದ್ಘಾಟಿಸಲಿದ್ದು, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಶಾಸಕರಾದ ಕೆ. ಗೋಪಾಲ ಪೂಜಾರಿ, ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿ ಗೋಪಾಲ ಎಸ್. ಪುತ್ರನ್ ಮೊದಲಾದವರು ಭಾಗವಹಿಸಲಿದ್ದಾರೆ. ಈ ಸಂದರ್ಭ ದಾನಿಗಳನ್ನು ಸನ್ಮಾನಿಸಲಾಗುವುದು ಎಂದು ದೇವಳದ ಆಡಳಿತ ಸಮಿತಿ ತಿಳಿಸಿದೆ.
ಕೊಡವೂರು: ಬ್ರಹ್ಮಕಲಶೋತ್ಸವ ಚಪ್ಪರ ಮುಹೂರ್ತ
ಉಡುಪಿ: ಇಲ್ಲಿನ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಫೆ. 27ರಿಂದ ಮಾ.14ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಚಪ್ಪರ ಮುಹೂರ್ತ ಇತ್ತೀಚೆಗೆ ನಡೆಯಿತು. ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರು ನೆರವೇರಿಸಿದರು. ಇದರ ಧಾರ್ಮಿಕ ವಿಧಿವಿಧಾನವನ್ನು ಪುತ್ತೂರು ಹಯವದನ ತಂತ್ರಿ ನಡೆಸಿದರು. ಶಾಸಕ ಪ್ರಮೋದ್ ಮದ್ವರಾಜ್, ನಗರಸಭಾ ಸದಸ್ಯೆ ಮೀನಾಕ್ಷಿ ಮಾಧವ, ಆಡಳಿತ ಮೊಕ್ತೇಸರ ಟಿ. ರಾಘವೇಂದ್ರ ರಾವ್, ಭಕ್ತವೃಂದ ಅಧ್ಯಕ್ಷ ರವಿರಾಜ್ ಹೆಗ್ಡೆ, ಸಹಮೊಕ್ತೇಸರರಾದ ರಾಘವೇಂದ್ರ ಭಟ್, ಸುಧಾ ಉಳಿತ್ತಾಯ, ಸುರೇಶ್ ಶೆಟ್ಟಿ, ಡಾ. ಗೋದಾವರಿ, ವಿಜಯ ಕೊಡವೂರು, ಸಂತೋಷ್ ಶೆಟ್ಟಿ ಪಂಚರತ್ನ, ಪ್ರಕಾಶ್ ಇದ್ದರು.
ಭಜನೆಯಿಂದ ಶಾಂತಿ, ಸಾಮರಸ್ಯ ಸಾಧ್ಯ: ಪುತ್ತಿಗೆ ಸುಗುಣೇಂಧ್ರ ತೀರ್ಥರು
ಹಿರಿಯಡ್ಕ:  ಜಗತ್ತಿಗೆ ಶಾಂತಿಮಂತ್ರ ನೀಡಿರುವ ದೇಶ ಭಾರತ ಜಗದ್ಗುರುವಿನ ಸ್ಥಾನದಲ್ಲಿದೆ. ಜೀವನದಲ್ಲಿ ಅಶಾಂತಿ, ಅಸಹನೆ, ಒತ್ತಡಗಳನ್ನು ನೀಗಿಸಲು ಸೂಕ್ತ ಪರಿಹಾರವೇ ಭಜನೆ. ಇದು ಮಾನವ ಕುಲಕ್ಕೆ ಭಾರತದ ಕೊಡುಗೆ ಎಂದು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಇಲ್ಲಿನ ಶ್ರೀ ಗಣೇಶ ಕಲಾ ಮಂದಿರದಲ್ಲಿ ಉಡುಪಿ ತಾಲೂಕು ಭಜನಾ ಮಂಡಳಿಗಳ ಒಕ್ಕೂಟದ ಹಿರಿಯಡಕ ವಲಯ ಉದ್ಘಾಟಿಸಿ ಅವರು, ಮಾತನಾಡಿದರು.
ತಾಲೂಕು ಒಕ್ಕೂಟ ಅಧ್ಯಕ್ಷ ಮಾಧವ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ತಾ.ಒ. ಪ್ರಧಾನ ಕಾರ್ಯದರ್ಶಿ ಎ. ಶಿವಕುಮಾರ್, ಉಪಾಧ್ಯಕ್ಷ ಭೋಜರಾಜ ಆರ್. ಕಿದಿಯೂರು, ಸಂ. ಕಾರ್ಯದರ್ಶಿ ಸುಂದರ ಜತ್ತನ್, ಉದ್ಯಮಿ ನಟರಾಜ್ ಹೆಗ್ಡೆ, ಕಬ್ಯಾಡಿ ಶ್ರೀ ದುರ್ಗಾಂಬಾ ಭವಾನಿ ದೇವಳದ ಟ್ರಸ್ಟಿ ಕೆ. ಅಶ್ವಿನ್ ಭಟ್, ಮಣಿಪಾಲ ಕೆಎಂಸಿ ಸಹಾಯಕ ಪ್ರಾಧ್ಯಾಪಕ ಕೃಷ್ಣಾನಂದ ನಾಯಕ್, ಮಹಿಳಾ ಸಂಚಾಲಕಿ ಸಂಧ್ಯಾ ಶೆಟ್ಟಿ ಕುದಿ ಇದ್ದರು.
'ತೆಂಡೂಲ್ಕರ್ ಕಾರ್ಟೂನ್‌' ವ್ಯಂಗ್ಯಚಿತ್ರ ಪ್ರದರ್ಶನ ಉದ್ಘಾಟನೆ
ಉಡುಪಿ:  ಇಲ್ಲಿನ ಅಂಬಾಗಿಲು ಗೆರೆಬರೆ ಚಿತ್ರಕಲಾ ತರಬೇತಿ ಕೇಂದ್ರದ 9ನೇ ವರ್ಷಾಚರಣೆಯ ಸಲುವಾಗಿ 7 ದಿನಗಳ 'ತೆಂಡೂಲ್ಕರ್ ಕಾರ್ಟೂನ್‌' ವ್ಯಂಗ್ಯಚಿತ್ರ ಪ್ರದರ್ಶನ ಭಾನುವಾರ ಉದ್ಘಾಟನೆಗೊಂಡಿತು.
ಕ್ರಿಕೆಟ್ ಕಾರ್ಟೂನ್‌ಗಳಲ್ಲಿ ಪರಿಣತಿ ಹೊಂದಿದ ಫ್ರೀಲ್ಯಾನ್ಸ್ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರು ಸಚಿನ್ ಅವರ ವ್ಯಂಗ್ಯ ಭಾವಚಿತ್ರ ಬರೆದು ಪ್ರದರ್ಶನ ಉದ್ಘಾಟಿಸಿದರು. ಈ ಸಂದರ್ಭ, 'ಲಗಾನ್‌' ಚಿತ್ರದ ಹಾಡಿನ ಹಿನ್ನೆಲೆಯಲ್ಲಿ ಬಿಳಿ ಸಮವಸ್ತ್ರ ಧರಿಸಿದ 11 ವಿದ್ಯಾರ್ಥಿಗಳು ಪ್ರದರ್ಶಿಸಿದ ಕ್ರಿಕೆಟ್ ನೃತ್ಯ ಉದ್ಘಾಟನೆಗೆ ಹೊಸತನ ತಂದಿತು. ನಂತರ 'ಕಾರ್ಟೂನಿಸ್ಟ್ ಕಂಡ ತೆಂಡೂಲ್ಕರ್‌' ವ್ಯಂಗ್ಯಚಿತ್ರ ಸಂಕಲನವನ್ನು ಪತ್ರಕರ್ತ ಪ್ರೇಮಾನಂದ ಕಾಮತ್ ಉದ್ಘಾಟಿಸಿದರು.
ಬಹುಮಾನ ವಿತರಣೆ: ಸಮಾರಂಭದಲ್ಲಿ, ಇತ್ತೀಚೆಗೆ ಜರುಗಿದ 'ವರ್ಣಸ್ಪರ್ಶ' ಕಾರ್ಯಾಗಾರದಲ್ಲಿ ಮದರಂಗಿ ಮತ್ತು ಟ್ಯಾಟೂ ಬರೆಯುವ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗೆರೆಬರೆ ಟ್ರಸ್ಟಿ ವಿಶ್ವನಾಥ ಆಚಾರ್ಯ ಅಧ್ಯಕ್ಷತೆಯಲ್ಲಿ ಸಮಾರಂಭ ಜರುಗಿತು. ಸಿಂಡಿಕೇಟ್ ಬ್ಯಾಂಕ್ ಮಣಿಪಾಲ ಶಾಖೆ ವ್ಯವಸ್ಥಾಪಕ ಅಶೋಕ್ ನಾಯಕ್, ಕ್ರಿಕೆಟ್ ವೀಕ್ಷಕ ವಿವರಣೆಗಾರ ವಿನಯ್  ಉದ್ಯಾವರ ಮತ್ತು ಕಲಾಂಗಣ ಸಂಸ್ಥೆಯ ಮಾಧವ ಗಾಂಸ್ಕರ್ ಇದ್ದರು. ಈ ಪ್ರದರ್ಶನದ ಜೊತೆಗೆ ಮಕ್ಕಳ ವಾರ್ಷಿಕ ಚಿತ್ರಕಲಾ ಪ್ರದರ್ಶನವೂ ಜ. 26ರವರೆಗೆ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ.
ಆರೋಗ್ಯ ಉಚಿತ ತಪಾಸಣೆ ಶಿಬಿರ
ಕಾರ್ಕಳ: ಮಾಳ ಗ್ರಾಮದ ಮಲ್ಲಾರು ಶ್ರೀ ಗುರುಕುಲ ಹಿ.ಪ್ರಾ. ಶಾಲೆಯಲ್ಲಿ ಇತ್ತೀಚೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರ, ಕೆಎಂಸಿ ಮಣಿಪಾಲ, ಮಾಳ ಗ್ರಾ.ಪಂ. ವತಿಯಿಂದ ಆರೋಗ್ಯ ಉಚಿತ ತಪಾಸಣಾ ಶಿಬಿರ ನಡೆಯಿತು. ಗ್ರಾ.ಪಂ. ಅಧ್ಯಕ್ಷೆ ಲೀಲಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದು, ಕಾರ್ಕಳ ತಾ.ಪಂ. ಅಧ್ಯಕ್ಷೆ ರಶ್ಮಿ ಶೆಟ್ಟಿ ಶಿಬಿರ ಉದ್ಘಾಟಿಸಿದರು.
ಕಾರ್ಕಳ ತಾಲೂಕು ಪಂಚಾಯಿತಿ ಸದಸ್ಯರಾದ ಸುಗುಣ ಸುವರ್ಣ, ಸುಜಿತ್ ಕುಮಾರ್ ಶೆಟ್ಟಿ, ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ ಡಾ. ನಾಗಭೂಷಣ ಉಡುಪ, ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಉಪಾಧ್ಯಕ್ಷ ಡಾ. ಜ್ಞಾನೇಶ್ ಕಾಮತ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಜಾನನ ಮರಾಠೆ, ಮುಖ್ಯ ಶಿಕ್ಷಕಿ ವಸಂತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧಾಕರ್ ಶೆಟ್ಟಿ ಇದ್ದರು.
ವೈದ್ಯಾಧಿಕಾರಿ ಡಾ. ಪ್ರಕಾಶ್ ಕುಮಾರ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.
ಹಿರಿಯ ಆರೋಗ್ಯ ಸಹಾಯಕ ಶ್ರೀನಿವಾಸ ವಂದಿಸಿದರು, ಆರೋಗ್ಯ ಸಹಾಯಕ ವಸಂತ್ ಶೆಟ್ಟಿ ನಿರೂಪಿಸಿದರು.  ಆರೋಗ್ಯ  ತಪಾಸಣೆ ಶಿಬಿರದಲ್ಲ್ಲಿ ಸುಮಾರು 210 ಫಲಾನುಭವಿಗಳನ್ನು ಉಚಿತ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಯಿತು.
ಮುಖ್ಯ ಶಿಕ್ಷಕರಿಗೆ ಸಕಾಲ ತರಬೇತಿ
ಮಣಿಪಾಲ: ಸರ್ಕಾರದ ಸೇವೆಗಳು ಜನಸಾಮಾನ್ಯರಿಗೆ ಸಕಾಲದಲ್ಲಿ ತಲುಪಿದಾಗ ಮಾತ್ರ ಅವರಲ್ಲಿ ಸರ್ಕಾರಿ ವ್ಯವಸ್ಥೆ ಕುರಿತು ವಿಶ್ವಾಸ ಉಳಿಯಲು ಸಾಧ್ಯ ಎಂದು ಆರ್‌ಎಂಎಸ್‌ಎ ಯೋಜನೆಯ ಹಿರಿಯ ಕಾರ್ಯಕ್ರಮ ಅಧಿಕಾರಿ ಅಬ್ದುಲ್ ವಾಜೀದ್ ಖಾಜಿ ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಪ್ರೌಢಶಾಲೆ ಮುಖ್ಯಸ್ಥರಿಗೆ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಏರ್ಪಡಿಸಿದ್ದ 2 ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಆರ್‌ಎಂಎಸ್‌ಎ ಕಾರ್ಯಕ್ರಮ ಅಧಿಕಾರಿ ಮಂಜುನಾಥ ಪಿ.ಎಂ., ಕುಮಾರ್ ಆರ್.ಎನ್., ಅಶೋಕ ಕಾಮತ್, ಹರ್ಷರಾಜ್  ಇದ್ದರು. ಸರ್ವಶಿಕ್ಷಣ ಅಭಿಯಾನ ಅಧಿಕಾರಿಗಳಾದ ನಾಗರಾಜ್, ಸುಬ್ರಹ್ಮಣ್ಯ ವೇದಿಕೆಯಲ್ಲಿದ್ದರು.
ಸ್ನೇಹ ಸಂಗಮ ಕಾರ್ಯಕ್ರಮ
ಉಡುಪಿ: ನೂತನ ವರ್ಷಾಚರಣೆಯ ಪ್ರಯುಕ್ತ ಪರ್ಕಳದ ದೇವಿನಗರ ಬಳಕೆದಾರರ ವೇದಿಕೆಯ ವತಿಯಿಂದ ಸ್ನೇಹ ಸಂಗಮ ಕಾರ್ಯಕ್ರಮವು ಗಣೇಶ್ ಸಾಮಿಲ್ ವಠಾರದಲ್ಲಿ ಇತ್ತೀಟೆಗೆ ಜರುಗಿತು.  ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪ್ರಮೋದ್ ಮಧ್ವರಾಜ್ ದೇವಿನಗರ ನಿವಾಸಿಗಳ ಪ್ರಮುಖ ಬೇಡಿಕೆಗಳಾದ ಬಸ್ ನಿಲ್ದಾಣ ಹಾಗೂ ಮಣಿಪಾಲದಿಂದ ಪರ್ಕಳದವರೆಗಿನ ರಸ್ತೆ ಅಗಲೀಕರಣಗಳನ್ನು ಶೀಘ್ರದಲ್ಲೇ ಈಡೇರಿಸುವುದಾಗಿ ಭರವಸೆಯಿತ್ತರು.  ನಗರಸಭೆ ಅಧ್ಯಕ್ಷ ಯುವರಾಜ್, ಸಂಸ್ಕಾರ ಭಾರತಿ ಮಂಗಳೂರು ವಿಭಾಗದ ಸಂಚಾಲಕ ಆದರ್ಶ ಗೋಖಲೆ, 80ನೇ ಬಡಗಬೆಟ್ಟು ಪಂಚಾಯತ್ ಅಧ್ಯಕ್ಷ ಶ್ರೀದೇವಿ, ನಗರ ಸಭಾ ಸದಸ್ಯೆ ಸುಮಿತ್ರಾ ಆರ್.ನಾಯಕ್, ದೇವಿನಗರ ಬಳಕೆದಾರರ ವೇದಿಕೆಯ ಅಧ್ಯಕ್ಷ ಎಂ. ಮಂಜುನಾಥ ಉಪಾಧ್ಯ, ಗೌರವಾಧ್ಯಕ್ಷ ಹಾಜಿ ಕೆ. ಅಬೂಬಕ್ಕರ್ ಇದ್ದರು.
'ಧೀಮಹಿ' ತರಬೇತಿ ಕೇಂದ್ರ ಉದ್ಘಾಟನೆ
ಉಡುಪಿ: ಇಲ್ಲಿನ ಎಂ.ಜಿ.ಎಂ. ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ನ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಆರಂಭಿಸಿದ ಧೀಮಹಿ ಕೌಶಲ ತರಬೇತಿ ಕೇಂದ್ರವನ್ನು ಕಾಲೇಜಿನ ಕಂಪ್ಯೂಟರ್ ಸೈನ್ಸ್ ಸ್ನಾತಕೋತ್ತರ ಮತ್ತು ಸಂಶೋಧನಾ ವಿಭಾಗದಲ್ಲಿ ಕಂಪ್ಯೂಟರ್ ತಜ್ಞ ಗೋಪಾಲಕೃಷ್ಣ ಜೋಯಿಷ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ.ಎನ್. ಹಾಲಾ ನಾಯ್ಕ್, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಪ್ರೊ.ಎಂ. ವಿಶ್ವನಾಥ ಪೈ, ಸ್ಥಳೀಯ ಹಿರಿಯ ಐ.ಟಿ. ಕ್ಷೇತ್ರದ ಪರಿಣಿತ ಉದ್ಯಮಿಗಳು ಇದ್ದರು.
ಭಜನಾ ಕಾರ್ಯಕ್ರಮ
ಉಡುಪಿ:  ಪರ್ಯಾಯೋತ್ಸವ ಪ್ರಯುಕ್ತ ಉಡುಪಿ ಭಜನಾ ಮಂಡಳಿಗಳ ಒಕ್ಕೂಟ ವತಿಯಿಂದ ಉಡುಪಿ ರಥಭೀದಿಯ ನರಸಿಂಹ ವೇದಿಕೆಯಲ್ಲಿ ಜರಗಿದ ಭಜನಾ ಕಾರ್ಯಕ್ರಮವನ್ನು ಪರ್ಯಾಯ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷ ಮಾಧವ ಸುವರ್ಣ, ಉಪಾಧ್ಯಕ್ಷ ಭೋಜರಾಜ್, ಸುಪ್ರಭಾ ಆಚಾರ್ಯ, ಪ್ರ. ಕಾರ್ಯದರ್ಶಿ ಎ. ಶಿವಕುಮಾರ್ ಇದ್ದರು.
ಸೈಕಲ್ ವಿತರಣೆ
ಉಡುಪಿ: ಇಲ್ಲಿನ ಕ್ರಿಶ್ಚಿಯನ್ ಹೈಸ್ಕೂಲ್‌ನ ವಿದ್ಯಾರ್ಥಿಗಳಿಗೆ ಶಾಸಕ ಪ್ರಮೋದ್ ಮಧ್ವರಾಜ್ ಅವರು ಸರ್ಕಾರ ಉಚಿತವಾಗಿ ನೀಡುವ ಸೈಕಲ್‌ಗಳನ್ನು ವಿತರಿಸಿದರು. ನಗರಸಭಾ ಸದಸ್ಯ ರಮೇಶ್ ಕಾಂಚನ್, ಶಾಲೆ ಸಂಚಾಲಕ ಸುಶೀಲ್ ಬಂಗೇರ, ದಿನೇಶ್ ಪುತ್ರನ್, ಪ್ರತಾಪ್ ಕುಮಾರ್, ಸತೀಶ್ ಎನ್, ಶಾಲೆ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸೀತರಾಮ ಆಚಾರ್ಯ, ಶಿಕ್ಷಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement