ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕಾಂಗ್ರೆಸ್‌ನಿಂದ ಭ್ರಮನಿರಸನ; ಕೋ.ಸೌ. ವೇದಿಕೆ ಆರೋಪ

Mainashree
Updated On : 23 Jan 2014, 12:41 pm

ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ 6 ತಿಂಗಳಲ್ಲಿಯೇ ಜನರಿಗೆ ಭ್ರಮನಿರಸನವಾಗಿದೆ. ಮಾತ್ರವಲ್ಲದೆ, ಬರಲಿರುವ ದಿನಗಳು ಇನ್ನಷ್ಟು ಭೀಕರವಾಗಲಿದೆ ಎನ್ನುವ ಸೂಚನೆಗಳು ಎಲ್ಲೆಡೆ ಕಾಣಿಸುತ್ತಿದೆ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕರಾವಳಿ, ಮಲೆನಾಡಿನ ಪ್ರಚಲಿತ ವಿದ್ಯಮಾನಗಳ ಕುರಿತ ಸತ್ಯಶೋಧನಾ ಸಮಿತಿ ಆರೋಪಿಸಿದೆ.
ಕರಾವಳಿ, ಮಲೆನಾಡಿನ ಪ್ರಚಲಿತ ವಿದ್ಯಮಾನಗಳ ಕುರಿತ ಸತ್ಯಶೋಧನಾ ತಂಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸತ್ಯಶೋಧನೆಯ ಮಧ್ಯಂತರ ವರದಿ ಬಿಡುಗಡೆ ಮಾಡಿತು.  ಕರ್ನಾಟಕದಲ್ಲಿ 2 ವರ್ಷಗಳ ಕಾಲ ಬಿಜೆಪಿ- ಜೆಡಿಎಸ್ ಸರ್ಕಾರ, ನಂತರದ 5 ವರ್ಷಗಳ ಬಿಜೆಪಿ ಸರ್ಕಾರಗಳು ಭ್ರಷ್ಟಾಚಾರ, ದುರಾಡಳಿತ, ಕೋಮು ಹಿಂಸಾಚಾರ ನಡೆಸಿ ಅಧಿಕಾರ ಕಳೆದುಕೊಂಡಿತು. ಜನ ಬೇರೆ ಆಯ್ಕೆ ಇಲ್ಲದೆ ಕಾಂಗ್ರೆಸ್ ಸರ್ಕಾರ ಆರಿಸಿದರು. ಆದರೆ ಈ ಸರ್ಕಾರ ಜನರನ್ನು ಭ್ರಮನಿರಸನಗೊಳಿಸಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
 ಸಮಿತಿಯ ಸದಸ್ಯ, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ. ಎಲ್. ಅಶೋಕ್ ಮಾತನಾಡಿ, ಕಾಲೇಜುಗಳಲ್ಲಿಯೂ ಸೌಹಾರ್ದ ಕೆಡಿಸಿ ವಿದ್ಯಾರ್ಥಿಗಳ ನಡುವೆ ಧರ್ಮದ ಹೆಸರಿನಲ್ಲಿ ಗುಂಪುಗಳನ್ನು ಬೆಳೆಸಲಾಗುತ್ತಿದೆ ಎಂದು ಆರೋಪಿಸಿದರು.
ಮಾನವ ಹಕ್ಕುಗಳ ಹೋರಾಟ ಸಮಿತಿಯ ಪ್ರೊ. ನಗರಿ ಬಾಬಯ್ಯ, ಕ.ಕೋ.ಸೌ. ವೇದಿಕೆಯ ಜಿಲ್ಲಾಧ್ಯಕ್ಷ ಜಿ. ರಾಜಶೇಖರ್, ಫಾ. ವಿಲಿಯಂ ಮಾರ್ಟಿಸ್ ಮುಂತಾದರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement