ಪ್ರೊ. ರಾಮಚಂದ್ರ ಆಚಾರ್‌ಗೆ ಭಾರತ ಗೌರವ ಪ್ರಶಸ್ತಿ
ಉಡುಪಿ: ಪ್ರವಾಸಿ ಭಾರತೀಯ ದಿನದ ಅಂಗವಾಗಿ ಇಂಡಿಯಾ ಇಂಟರ್‌ನ್ಯಾಷನಲ್ ಫ್ರೆಂಡ್‌ಶಿಪ್ ಸೊಸೈಟಿ ವತಿಯಿಂದ ದೆಹಲಿಯಲ್ಲಿ ಗ್ಲೋಬಲ್ ಫ್ರೆಂಡ್‌ಶಿಪ್ ಡೇ ಇತ್ತೀಚೆಗೆ ನಡೆಯಿತು.
ಈ ಸಂದರ್ಭ ಉಡುಪಿ ಜಿಲ್ಲೆಯ ಕುದಿ ಗ್ರಾಮದ ಪ್ರೊ. ರಾಮಚಂದ್ರ ಆಚಾರ್ ಅವರ ಸಂಶೋಧನೆಗಳು ಹಾಗೂ ಕೆನಡಾ ಮತ್ತು ಭಾರತದ ನಡುವೆ ಹೆಚ್ಚಿನ ಸಹಯೋಗದ ನಿಟ್ಟಿನಲ್ಲಿ ನೀಡಿದ ಕೊಡುಗೆಗಳನ್ನು ಪರಿಗಣಿಸಿ ಅವರಿಗೆ 'ಭಾರತ ಗೌರವ ಪ್ರಶಸ್ತಿ' ಪ್ರದಾನ ಮಾಡಲಾಯಿತು.
ಸಂಸತ್ತು ವ್ಯವಹಾರಗಳ ರಾಜ್ಯ ಸಚಿವ ರಾಜೀವ್ ಶುಕ್ಲಾ, ತಮಿಳುನಾಡಿನ ಮಾಜಿ ಗವರ್ನರ್ ಭೀಷ್ಮ ನಾರಾಯಣ್ ಸಿಂಗ್, ಮಾರಿಷಸ್‌ನ ಮಾಜಿ ಉಪರಾಷ್ಟ್ರಪತಿ ಆರ್. ಭುನ್ದೋ ಇದ್ದರು.
ದಿ.ರಾಘವೇಂದ್ರ ಆಚಾರ್, ಜಾಂಬವತಿ ಆಚಾರ್ ದಂಪತಿ ಪುತ್ರರಾದ ಪ್ರೊ. ರಾಮಚಂದ್ರ ಆಚಾರ್ ಪ್ರಸ್ತುತ ಕೆನಡಾ ರಾಜಧಾನಿ ಒಟ್ಟಾವಾದಲ್ಲಿರುವ ಕಾರ್ಲ್‌ಟನ್ ವಿವಿಯಲ್ಲಿ ಪ್ರೊಫೆಸರ್ ಆಗಿದ್ದಾರೆ.