ಬಂಟಕಲ್ಲು: ದುರ್ಗಾಯುತ ಹೋಮ
ಉಡುಪಿ: ಸುವೃಷ್ಟಿ ಹಾಗೂ ಲೋಕ ಕಲ್ಯಾಣಾರ್ಥ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ನಿಧಿಯಲ್ಲಿ ಶುಕ್ರವಾರ ದುರ್ಗಾಯುತ ಹೋಮವನ್ನು ನಡೆಸಲಾಯಿತು.
ಕ್ಷೇತ್ರದ ಹಿರಿಯ ಅರ್ಚಕ ವೇದಮೂರ್ತಿ ವೇದವ್ಯಾಸರಾಯ ಭಟ್ ನೇತೃತ್ವದಲ್ಲಿ ಪೂರ್ವಾಹ್ನ ಪ್ರಾರಂಭಗೊಂಡ ಈ ಹೋಮಕ್ಕೆ ಮಧ್ಯಾಹ್ನ ಪೂರ್ಣಾಹುತಿ ನೀಡಲಾಯಿತು. ಬಳಿಕ ಮಹಾಪೂಜೆ, ಅನ್ನಸಂತರ್ಪಣೆ ಜರುಗಿತು. ಶ್ರೀ ಕ್ಷೇತ್ರ ಆಡಳಿತ ಮೊಕ್ತೇಸರ ಬೆಲ್ಪತ್ರೆ ವಿಶ್ವನಾಥ ನಾಯಕ್, ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ ವಾಗ್ಳೆ, ಹಿರಿಯ ಜ್ಯೋತಿಷಿ ಮಾಣ್ಯೂರು ಉಪೇಂದ್ರ ಪ್ರಭು, ರಾಜಾಪುರ ಸಾರಸ್ವತ ಯುವ ವೃಂದದ ಅಧ್ಯಕ್ಷ ಅನಂತರಾಮ ವಾಗ್ಳೆ, ಭಗವದ್ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ರಾಜಾಪುರ ಸಾರಸ್ವತ ಸಮಾಜ ಬಾಂಧವರು ಧಾರ್ಮಿಕ ಕಾರ್ಯಕ್ರಮ ಸಂಘಟಿಸಿದ್ದರು.