ಅತ್ಯಾಚಾರ ಹೆಚ್ಚಳ ಖಂಡಿಸಿ ಶಾಲೆ- ಕಾಲೇಜು ಬಂದ್ 22ಕ್ಕೆ
ಮಂಗಳೂರು: ಸ್ತ್ರೀಯರ ಮೇಲಿನ ದೌರ್ಜನ್ಯ, ಬಲಾತ್ಕಾರ, ಅತ್ಯಾಚಾರ ಖಂಡಿಸಿ ಜು.22ರಂದು ದ.ಕ.ಜಿಲ್ಲೆಯಲ್ಲಿ ಶಾಲಾ ಕಾಲೇಜು ಬಂದ್ಗೆ ತುಳುನಾಡ ರಕ್ಷಣಾ ವೇದಿಕೆ ಕರೆ ನೀಡಿದೆ.
ಅಂದು ಶಾಲಾ ಕಾಲೇಜು ಬಂದ್ ಮಾಡಿ ಬೆಳಗ್ಗೆ 11ಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಇತ್ತೀಚೆಗೆ ರಾಜ್ಯದಲ್ಲಿ ಹೆಣ್ಮಕ್ಕಳು, ವೃದ್ಧೆಯರು ಹಾಗೂ ಮಹಿಳೆಯರ ಮೇಲೆ ಬಲಾತ್ಕಾರ ಘಟನೆ ನಿರಂತರ ನಡೆಯುತ್ತಿರುವುದು ತೀರಾ ಕಳವಳಕಾರಿ. ಹೆಣ್ಮಕ್ಕಳು ಭಯದಿಂದ ಬದುಕುವ ಸ್ಥಿತಿ ಎದುರಾಗಿದೆ. ಆದ್ದರಿಂದ ಘಟನೆಯನ್ನು ಖಂಡಿಸಿ ಪಕ್ಷಾತೀತ ನೆಲೆಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತುರವೇ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಹಾಗೂ ಸಲಹೆಗಾರ ಎಂ.ಜಿ. ಹೆಗಡೆ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿಕಾ ಜೈನ್, ಪ್ರಧಾನ ಕಾರ್ಯದರ್ಶಿಗಳಾದ ವಿನುತಾ ಡಿಸೋಜ, ಸಂಘಟನಾ ಕಾರ್ಯದರ್ಶಿ ವಿಜಯ ನಾಯರ್ ಇದ್ದರು.