ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

'ಗೋವಾ ಕನ್ನಡಿಗರ ಅಳಲು ಸರ್ಕಾರಕ್ಕೆ ಕೇಳುತ್ತಿಲ್ಲ ಏಕೆ'

Rashmi Kasaragodu
Updated On : 20 Jul 2014, 2:02 am

ಮಂಗಳೂರು: ಹೊಟ್ಟೆಪಾಡಿಗಾಗಿ ಗೋವಾಕ್ಕೆ ಹೋದ ಕನ್ನಡಿಗರ ಮೇಲೆ ಕೀಳಾಗಿ ವ್ಯವಹರಿಸಿದ ಗೋವಾ ಸರ್ಕಾರಕ್ಕೆ ಧಿಕ್ಕಾರವಿರಲಿ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಟೀಕಿಸಿದ್ದಾರೆ.  ಮಳೆಗಾಲದಲ್ಲಿ ಗೋವಾ ಸರ್ಕಾರ ಕನ್ನಡಿಗರನ್ನು ತೆರವುಗೊಳಿಸುವ ಹೀನಾಯ ಕಾರ್ಯಕ್ಕೆ ಮುಂದಾಗಿದೆ. ಕಾರ್ಮಿಕರು ನೆಲೆಯಿಲ್ಲದೆ ತಮ್ಮ ತಮ್ಮ ಊರಿಗೆ ಹೋದ ನಂತರ ಸರ್ಕಾರ ಹೇಳಿಕೆ ನೀಡಿದರೆ ಪ್ರಯೋಜನವೇನು. ನಿಜವಾಗಿ ಕಾಳಜಿ ಇದ್ದರೆ ಮಳೆಯಲ್ಲಿ ನೆನೆಯುತ್ತಾ ಕಷ್ಟಪಡುವ ಜೀವಗಳಿಗೆ ಗೋವಾ ಸರ್ಕಾರದೊಂದಿಗೆ ವ್ಯವಹರಿಸಿ ನೆಲೆ ಕಲ್ಪಿಸಲಿ ಎಂದು ಆಗ್ರಹಿಸಿದ್ದಾರೆ.   2004ರಲ್ಲಿ ಇದೇ ಗೋವಾ ಬೀಚ್‌ನಲ್ಲಿದ್ದ ಕನ್ನಡಿಗರ ಮನೆಯನ್ನು ಬಲತ್ಕಾರದಿಂದ ತೆರವುಗೊಳಿಸಿ ಅಲ್ಲಿಯ ಮಹಿಳೆಯರಿಗೆ ವೇಶ್ಯಾವಾಟಿಕೆಯ ಪಟ್ಟಕಟ್ಟಿದಾಗ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿ ವತಿಯಿಂದ ಪ್ರತಿಭಟಿಸಲಾಗಿತ್ತು. ಪರಿಣಾಮ ಅವರ ತೆರವಿನ ಕಾರ್ಯ ತಾತ್ಕಾಲಿಕವಾಗಿ ನಿಂತಿತ್ತು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪುತ್ತೂರಲ್ಲಿ ಶೌಚಗುಂಡಿ ತ್ಯಾಜ್ಯ: ಪ್ರತಿಭಟನೆ ಎಚ್ಚರಿಕೆ


ಪುತ್ತೂರು: ತಾಲೂಕಿನ 34 ನೆಕ್ಕಿಲಾಡಿಯಲ್ಲಿ ಪಂಪ್‌ಹೌಸ್ ಬಳಿಯ ಪುರಸಭಾ ವಸತಿಗೃಹದ ಶೌಚಗುಂಡಿಯ ತ್ಯಾಜ್ಯ ಪರಿಸರದಲ್ಲೆಡೆ ವ್ಯಾಪಿಸಿ ಅನಾರೋಗ್ಯಕ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ವಾರದೊಳಗೆ ಸ್ಪಂದನೆ ದೊರಕದಿದ್ದಲ್ಲಿ ಪುರಸಭೆ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು 34 ನೆಕ್ಕಿಲಾಡಿ ನಾಗರಿಕ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮ್ಯೂನಿಕ್ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಸಾರ್ವಜನಿಕರಿಗೆ ಕಾಡುತ್ತಿರುವ ಅನಾರೋಗ್ಯಕರ ಪರಿಸ್ಥಿತಿ ಬಗ್ಗೆ ಸೂಕ್ತ ಸ್ಪಂದನ ಬಯಸಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಲೋಕಾಯುಕ್ತರಿಗೆ ದೂರು ನೀಡಿದ ವೇಳೆ 15 ದಿನಗಳಿಗೊಮ್ಮೆ ಶೌಚ ತೆಗೆಯುವುದಾಗಿ ಮತ್ತು ತಿಂಗಳೊಳಗೆ ಶೌಚಗುಂಡಿ ಸ್ಥಳಾಂತರಿಸುವುದಾಗಿ ಪುರಸಭೆ ಅಧಿಕಾರಿಗಳು ಉಪಲೋಕಾಯುಕ್ತ ಸುಭಾಷ್ ಡಿ.ಅಡಿಗರವರಿಗೆ ಭರವಸೆ ನೀಡಿದ್ದಾರೆ. ಆದರೆ ಭರವಸೆ ನೀಡಿ 30 ದಿನ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಸಂಘಟನಾ ಕಾರ್ಯದರ್ಶಿ ಇರ್ಫಾನ್, ಪರಿಸರದ ನಿವಾಸಿ ಮಹೇಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement