ಸಂಗೀತದಿಂದ ಆರೋಗ್ಯ: ಬಾಲಸುಬ್ರಹ್ಮಣ್ಯಂ
ಉಡುಪಿ: ಶಾಸ್ತ್ರೀಯ ಸಂಗೀತದ ಅಭ್ಯಾಸ ಮತ್ತು ಆಸಕ್ತಿಯಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಗಳಾಗುತ್ತವೆ ಎಂದು ಖ್ಯಾತ ಸಂಗೀತ ವಿದ್ವಾಂಸ ಮಧೂರು ಬಾಲಸುಬ್ರಹ್ಮಣ್ಯಂ ತಿಳಿಸಿದರು.
ಅವರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಸಾಂಸ್ಕೃತಿಕ ಸಂಘದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಕೆ. ಸದಾಶಿವ ರಾವ್ ಅಧ್ಯಕ್ಷತೆ ವಹಿಸಿದ್ದರು.ಪೂರ್ಣ ಪ್ರಜ್ಞ ಕಾಲೇಜಿನ ವಿದ್ಯಾರ್ಥಿವೇದಿಕೆ ಮತ್ತು ಲಲಿತಕಲಾ ಸಂಘದ ಪ್ರಾಧ್ಯಾಪಕ ಸಲಹೆಗಾರರಾದ ಪ್ರೊ. ಶಾಂತಿ ಲೂಯಿಸ್ ಮತ್ತು ಡಾ. ಶ್ರೀಕಾಂತ್ ಸಿದ್ದಾಪುರ ಉಪಸ್ಥಿತರಿದ್ದರು. ಸಮಾಒಂಭದಲ್ಲಿ ಪ್ರಮೋದ್ ಹೆಗಡೆ ಸ್ವಾಗತಿಸಿ, ಶಿವಕುಮಾರ್ ವಂದಿಸಿದರು. ದುರ್ಗಾ ಜೋಯಿಸ್ ನಿರೂಪಿಸಿದರು.