ತುಟ್ಟಿಭತ್ಯೆ ಆಗ್ರಹಿಸಿ ಬೀಡಿ ಕಾರ್ಮಿಕರ ಧರಣಿ
ಕಾರ್ಕಳ: ತುಟ್ಟಿಭತ್ಯೆಗೆ ಆಗ್ರಹಿಸಿ ಸ್ಥಳೀಯ ಭಾರತ್ ಬೀಡಿ ಶಾಖೆ ಎದುರು ಬೀಡಿ ಕಾರ್ಮಿಕರು ಸತ್ಯಾಗ್ರಹ ನಡೆಸಿದರು.
ಏಪ್ರಿಲ್ ಮೊದಲ ದಿನಾಂಕದಂದು ತುಟ್ಟಿಭತ್ಯೆ ಹೆಚ್ಚಿಸಲಾಗಿದ್ದು, ಸಾವಿರ ಬೀಡಿಗೆ 21.15ರಂತೆ ಕಾರ್ಮಿಕರಿಗೆ ನೀಡಬೇಕಿತ್ತು. ಆದರೆ 3 ತಿಂಗಳು ಕಳೆದರೂ ಬೀಡಿ ಕಾರ್ಮಿಕರಿಗೆ ತುಟ್ಟಿಭತ್ಯೆ ನೀಡದೆ ಮಾಲೀಕರು ಮೋಸ ಮಾಡುತ್ತಿದ್ದಾರೆ. ಇದರಿಂದ ಕಾರ್ಮಿಕರಿಗೆ ಅನ್ಯಾಯವಗಿದ್ದು ಬೀಡಿ ಕಾರ್ಮಿಕರು ಹೋರಾಟದ ದಾರಿ ಹಿಡಿಯುವುದು ಅನಿವಾರ್ಯವಾಗಿದೆ. ಬೆಂಗಳೂರಿನ ಬೀಡಿ ಕಾರ್ಮಿಕರ ಆಯುಕ್ತರಿಗೂ ಈ ವಿಷಯವನ್ನು ತಿಳಿಸಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಈಗಂತೂ ಅಗತ್ಯವಸ್ತುಗಳ ಬೆಲೆ ವಿಪರೀತ ಏರಿಕೆಯಾಗುತ್ತಿದ್ದು ಜನ ಸಾಮಾನ್ಯರು ಜೀವನ ನಡೆಸುವುದು ಕಷ್ಟಕರವಾಗಿದೆ. ಹಾಗಾಗಿ ತುಟ್ಟಿಭತ್ಯೆ ನೀಡಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.
ಸಿಐಟಿಸಿ ರಾಜ್ಯ ಮುಂದಾಳು ಬಿ.ಎಂ. ಭಟ್, ಅಧ್ಯಕ್ಷ ಲಕ್ಷ್ಮಣ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು