ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ತೆಕ್ಕಟ್ಟೆ: ಯಕ್ಷೋತ್ಸವ ಕಾರ್ಯಕ್ರಮ ಸಂಪನ್ನ

Rashmi Kasaragodu
Updated On : 25 Jul 2014, 12:08 pm

ಕುಂದಾಪುರ: ಕರಾವಳಿಯ ಶ್ರೀಮಂತ ಕಲೆಯಾದ ಯಕ್ಷಗಾನ ಕಲೆಯಲ್ಲಿ ನವಪೀಳಿಗೆಗೆ ಆಸಕ್ತಿ ಕಡಿಮೆಯಾಗುತ್ತಿರುವುದು ಆತಂಕದ ವಿಷಯ ಎಂದು ಉದ್ಯಮಿ ಅಭಿನಂದನ ಶೆಟ್ಟಿ ಅವರು ಹೇಳಿದರು.
ಅವರು ಕೇಂದ್ರ ಸಂಸ್ಕೃತಿ ಇಲಾಖೆಯ ಸಹಕಾರದಿಂದ ತೆಕ್ಕಟ್ಟೆಯ ಯಶಸ್ವಿ ಕಲಾ ವೃಂದದ ಆಶ್ರಯದಲ್ಲಿ ನಡೆದ ಯಕ್ಷೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಂದಾಪುರ ಗ್ರಾಮೀಣಾಭಿವೃದ್ಧಿ ಸೇವಾ ಕ್ರೀಡಾ ಅಧಿಕಾರಿ ದಿನಕರ ಶೆಟ್ಟಿ, ಬೆಂಗಳೂರಿನ ಯಕ್ಷದೇಗುಲದ ವ್ಯವಸ್ಥಾಪಕ ಕೋಟ ಸುದರ್ಶನ ಉರಾಳ ಭಾಗವಹಿಸಿದ್ದರು.
ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಮತ್ತು ರೋಟರಿ ಕ್ಲಬ್ ಅಧ್ಯಕ್ಷ ಶಂಕರ ದೇವಾಡಿಗ ಉಪಸ್ಥಿತರಿದ್ದರು.
ನಿವೃತ್ತ ಮುಖ್ಯ ಶಿಕ್ಷಕ ಶ್ರೀಧರ ಶೆಟ್ಟಿ ಮಾಲಾಡಿ ಅವರನ್ನು ಸನ್ಮಾನಿಸಲಾಯಿತು. ಹೆರಿಯ ನಿರೂಪಿಸಿದರು.
ಕಾರ್ಯಕ್ರಮದ ಸಂಯೋಜಕ ಕಡ್ಲೆ ಗಣಪತಿ ಹೆಗಡೆ ವಂದಿಸಿದರು. ನಂತರ ಕಡ್ಲೆ ಗಣಪತಿ ಹೆಗಡೆ ಅವರ ಸಂಯೋಜನೆಯಲ್ಲಿ 'ಶ್ರೀಕೃಷ್ಣ ಸಂಧಾನ' ಯಕ್ಷಗಾನ ಪ್ರದರ್ಶನ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement