ಮೈಕಲ್ ರೊಡ್ರಿಗಸ್ ಆಯ್ಕೆ
ಉಡುಪಿ: ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತ ಮಾಧ್ಯಮ ಪ್ರತಿನಿಧಿಗಳ ಸಮಿತಿ ಸಂಯೋಜಕರಾಗಿ ಪತ್ರಕರ್ತ ಮೈಕಲ್ ರೊಡ್ರಿಗಸ್ ಸಾಸ್ತಾನ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಉಡುಪಿ ಧರ್ಮಾಧ್ಯಕ್ಷರ ನಿವಾಸದಲ್ಲಿ ಜರುಗಿದ ಕ್ರೈಸ್ತ ಮಾಧ್ಯಮ ಪ್ರತಿನಿಧಿಗಳ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ವಹಿಸಿದ್ದರು.
ಸುರೇಶ್ ಬಂಗೇರಗೆ ಬೀಳ್ಕೊಡುಗೆ
ಗಂಗೊಳ್ಳಿ: ಕೆನರಾ ಬ್ಯಾಂಕಿನ ನೇರಳಕಟ್ಟೆ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮಂಗಳೂರಿನ ಪಂಪಬೈಲು ಶಾಖೆಗೆ ವರ್ಗಾವಣೆಗೊಂಡ ಶಾಖೆಯ ಉದ್ಯೋಗಿ ಸುರೇಶ ಬಂಗೇರ ಅವರನ್ನು ಶಾಖಾ ಸಿಬ್ಬಂದಿ ಇತ್ತೀಚೆಗೆ ಸನ್ಮಾನಿಸಿ ಬೀಳ್ಕೊಟ್ಟರು. ಬ್ಯಾಂಕ್ನ ಪ್ರಬಂಧಕ ಸತೀಶ ಬೀಡು ಅವರು ಸುರೇಶ ಬಂಗೇರ ಅವರನ್ನು ಸನ್ಮಾನಿಸಿದರು. ಬ್ಯಾಂಕ್ನ ಅಧಿಕಾರಿ ಗಿ.ವಿ. ಅಶೋಕ, ಸಿಬ್ಬಂದಿ ನಂದ್ಯಪ್ಪ ಬಿಲ್ಲವ, ಗಿರೀಶ ಭಂಡಾರಿ, ಶಂಕರ ಬೆಳ್ಳಾರ, ಮುರಳೀಧರ, ಜಿ. ಈಶ್ವರ, ಸುಶೀಲಾ ಇದ್ದರು.