ವರಮಹಾಲಕ್ಷ್ಮೀ ವ್ರತ ಆ.8ರಂದು
ಗಂಗೊಳ್ಳಿ: ಗಂಗೊಳ್ಳಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಮಹಿಳಾ ಮಂಡಳಿ ಆಶ್ರಯದಲ್ಲಿ 24ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವಣತಾಚರಣೆ ಆ.8 ರಂದು ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ. ಅದೇ ದಿನ ಶ್ರೀ ಮಹಿಳಾ ಸಂಘ ಗಂಗೊಳ್ಳಿ, ಮಾತೃಶ್ರೀ ಬಾಲಕಿಯರ ಭಜನಾ ತಂಡ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ವರಮಹಾಲಕ್ಷ್ಮೀ ವ್ರತ ಗಂಗೊಳ್ಳಿಯ ಶ್ರೀ ಇಂದುಧರ ದೇವಸ್ಥಾನದಲ್ಲಿ ದೇವಸ್ಥಾನದ ಮುಖ್ಯ ಅರ್ಚಕ ಪಾಂಡುರಂಗ ಭಟಟ್ನೇತಣತ್ವದಲ್ಲಿ ನಡೆಯಲಿದೆ.
ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಆ. 7ರಂದು
ಉಡುಪಿ ಜಿಲ್ಲಾ ಪಂಚಾಯಿತಿಯ 3ನೇ ಅವಧಿಯ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ಆ. 7ರಂದು ಮಧ್ಯಾಹ್ನ 3 ಗಂಟೆಗೆ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಯಾಗಿ ಭಾಗವಹಿಸಲಿದ್ದಾರೆ.
ಪಾಂಡುರಂಗ ಕಾಮತ್ಗೆ ಸನ್ಮಾನ
ಉಡುಪಿ: ಆಲ್ ಇಂಡಿಯಾ ವಿಜಯ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಶನ್ನ ಉಡುಪಿ ಘಟಕದ ವತಿಯಿಂದ ಸಂಘದ ನಿರ್ಗಮನ ಅಧ್ಯಕ್ಷ ಪಾಂಡುರಂಗ ಕಾಮತ್ ಎಸ್. ಅವರಿಗೆ ಇತ್ತೀಚೆಗೆ ಗೌರವಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿದ ಕಾಮತ್, ಆರೋಗ್ಯ, ಶಿಸ್ತು, ಆತ್ಮೀಯತೆ, ಸಮಯ ಪಾಲನೆ ಹಾಗೂ ಪ್ರಾಮಾಣಿಕತೆಯಿಂದ ಮಾತ್ರ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯ ಎಂದು ತಿಳಿಸಿದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕಿನ ನಿರ್ದೇಶಕ ಹರೀಶ್ ಬಲ್ಲಾಳ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಡುಪಿ ವಲಯದ ಪ್ರಾದೇಶಿಕ ಪ್ರಬಂಧಕಿ ಶಾಲಿನಿ ಶೆಟ್ಟಿ, ಎಸೋಸಿಯೇಶನ್ನ ನೂತನ ಅಧ್ಯಕ್ಷ ರಮೇಶ್ ಶೆಟ್ಟಿ, ಕೋಶಾಧಿಕಾರಿ ಚೈತ್ರ ಎಚ್.ಸಿ. ಭಾಗವಹಿಸಿದ್ದರು. ಬ್ಯಾಂಕಿನ ಅಧಿಕಾರಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಸಂಜಯ ವಾಲಿ ವಂದಿಸಿದರು. ಕಾಮತ್ ಅವರು ವಿಜಯ ಬ್ಯಾಂಕಿನಲ್ಲಿ 36 ವರ್ಷಗಳ ಕಾಲ ವಿವಿಧ ಶಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿ ಕಾರ್ಮಿಕರ ಹಾಗೂ ಅಧಿಕಾರಿಗಳ ಸಂಘಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇತ್ತೀಚೆಗೆ ಅವರು ಬ್ಯಾಂಕಿನ ಕ್ಷೇತ್ರಿಯ ಕಾರ್ಯಾಲಯದಲ್ಲಿ ಹಿರಿಯ ಪ್ರಬಂಧಕರಾಗಿ ನಿವೃತ್ತಿಯಾಗಿದ್ದಾರೆ.