ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ರಂಜಾನ್: ವಿಶೇಷ ಪ್ರಾರ್ಥನೆ...

Lingaraj Badiger
Updated On : 30 Jul 2014, 10:57 am

ಉಚ್ಚಿಲ: ಜನರ ಬಳಿಗೆ ತೆರಳಿ, ಸಾಲಗರಾರನ್ನು ಸತಾಯಿಸದೆ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಸಹಕಾರಿ ಬ್ಯಾಂಕ್‌ಗಳು ಜನಸ್ನೇಹಿಗಳಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸಲಹೆ ಮಾಡಿದ್ದಾರೆ.
ಅವರು ಇಲ್ಲಿನ ಮೃತ್ಯುಂಜಯ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ 80ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಉಚ್ಚಿಲ ಶಾಖೆಯಲ್ಲಿ ಸಾವಿರಕ್ಕೂ ಅಧಿಕ ಖಾತೆಗಳಿಂದ 6 ಕೋಟಿಗೂ ಅಧಿಕ ಮೊತ್ತದ ಠೇವಣಿ ಸಂಗ್ರಹವಾಗಿದೆ. ಹತ್ತುಪಟ್ಟು ವ್ಯವಹಾರಕ್ಕೆ ಉಚ್ಚಿಲ ಶಾಖೆ ಬದ್ಧವಾಗಿದ್ದು, ಇಲ್ಲಿನ ಜನರು ಈ ಶಾಖೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದವರು ಕರೆ ನೀಡಿದರು.
ಬೆಳಪು ಗ್ರಾಪಂ ಮಾಜಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಈ ಶಾಖೆಯ ಗಣಕೀಕೃತ ವಿಭಾಗ ಉದ್ಘಾಟಿಸಿ ಸಹಕಾರಿ ರಂಗದ ಬೆಂಬಲ ಇದ್ದರೆ ಗ್ರಾಮೀಣ ಜನರ ಅನೇಕ ಕನಸುಗಳು ನನಸಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ನೂತನ ಶಾಖೆಯಡಿ ನೂತನ ನವೋದಯ ಸ್ವಸಹಾಯ ಸಂಘಗಳಾದ ಮಹಾದೇವಿ ಸಂಘ, ಶಿರ್ಡಿ ಬಾಬಾ ಸಂಘ, ಅಶ್ವತ್ಥ್ ಸಂಘಗಳನ್ನು ಉದ್ಘಾಟಿಸಲಾಯಿತು.
ಸಂಚಯ ಖಾತೆ ಮತ್ತು ನಿರಖು ಠೇವಣಿ ಇರಿಸಿದ ಗ್ರಾಹಕರ ಲಕ್ಕಿ ಡ್ರಾನಲ್ಲಿ ವಿಜೇತ ಗ್ರಾಹಕರಿಗೆ 4 ಗ್ರಾಂ ಮತ್ತು 2 ಗ್ರಾಂ ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ನೀಡಲಾಯಿತು.
ಕಟ್ಟಡ ಮಾಲೀಕ ಗಂಗಾಧರ ಸುವರ್ಣ ದಂಪತಿ, ಉಚ್ಚಿಲ ಗ್ರಾಪಂ ಅಧ್ಯಕ್ಷ ವಸಂತ ಶೆಟ್ಟಿ, ಎಲ್ಲೂರು ವಿಶ್ವನಾಥ ದೇವಳದ ಆಡಳಿತ ಮೊಕ್ತೇಸರ ವೈ. ಪ್ರಫುಲ್ಲ ಶೆಟ್ಟಿ, ಬ್ಯಾಂಕ್‌ನ ನಿರ್ದೇಶಕರಾದ ವಾದಿರಾಜ ಶೆಟ್ಟಿ, ಪ್ರತಿಮಾ ಚಂದ್ರ, ಗ್ರೆಗರಿ ಕಸ್ತಲಿನೋ ಉಪಸ್ಥಿತರಿದ್ದರು. ಬ್ಯಾಂಕ್‌ನ ನಿರ್ದೇಶಕ ರಾಜೇಶ್ ರಾವ್ ಸ್ವಾಗತಿಸಿದರು. ರಾಜೇಂದ್ರ ಭಟ್ ಕಾರ್ಯಕ್ರಮ ಸಂಯೋಜಿಸಿದರು. ಬಿ. ಬಾಬು ಬಿಲ್ಲವ ವಂದಿಸಿದರು.

ಕುದ್ರೊಟ್ಟು: ಹಿಂಸಾತ್ಮಕ ಸ್ಥಿತಿಯಲ್ಲಿದ್ದ ದನದ ರಕ್ಷಣೆ
ಉಡುಪಿ: ಶಿರ್ವದ ಮುಂಡ್ಕೂರು ಗ್ರಾಮ ಸಚ್ಚೇರಿಪೇಟೆ ಸಮೀಪದ ಕುದ್ರೊಟ್ಟು ಎಂಬಲ್ಲಿ ಹಿಂಸಾತ್ಮಕ ಸ್ಥಿತಿಯಲ್ಲಿ ಕಾಲುಗಳನ್ನು ಕಟ್ಟಿ ಹಾಕಿದ ದನ ಪತ್ತೆಯಾಗಿದ್ದು, ಸ್ಥಳೀಯ ಯುವಕರು ಈ ದನವನ್ನು ರಕ್ಷಿಸಿ, ಕೊಡ್ಯಡ್ಕ ಸಮೀಪದ ಗೋರಕ್ಷಣಾ ಕೇಂದ್ರಕ್ಕೆ ಹಸ್ತಾಂತರಿಸಿದ್ದಾರೆ.
ಬಹುಶಃ ದನಗಳ್ಳರು ಎಲ್ಲಿಂದಲೋ ಕದ್ದು ತಂದಿರಬಹುದಾದ ಈ ದನವನ್ನು ಯಾಕೆ ಈ ರೀತಿ ಇಲ್ಲಿ ರಸ್ತೆ ಪಕ್ಕದ ಕೃಷಿಕರ ತೋಟದಲ್ಲಿ ಎಸೆದು ಹೋಗಿದ್ದಾರೆ ಎನ್ನುವುದು ಅಚ್ಚರಿಗೆ ಕಾರಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಶಿರ್ವ, ಬೆಳ್ಮಣ್, ಮುಂಡ್ಕೂರು, ನಂದಳಿಕೆ ಪರಿಸರದಲ್ಲಿ ಹಟ್ಟಿಯಿಂದ ದನಗಳನ್ನು ಕದಿಯುವ ಕದೀಮರ ಜಾಲ ಸಕ್ರಿಯವಾಗಿದೆ. ದಿನನಿತ್ಯ  ಪರಿಸರದ ಕೃಷಿಕರ ಹಟ್ಟಿಯಿಂದ ದನಗಳು ಕಾಣೆಯಾಗುತ್ತಿರುವ ಅನೇಕ ಘಟನೆಗಳು ನಡೆದಿವೆ.
ಕಳೆದ ವಾರದಲ್ಲಿ ಶಿರ್ವದ ಅಟ್ಟಿಂಜೆ ಎಂಬಂಲ್ಲಿ ಪ್ರಯಾಣಿಕರ ರಿಕ್ಷಾವೊಂದರಲ್ಲಿ ಜೆರ್ಸಿ ದನವನ್ನು ಅಮಾನವೀಯವಾಗಿ ತುಂಬಿಸಿ ಸಾಗಾಟ ಮಾಡುತ್ತಿದ್ದಾಗ, ಪೊಲೀಸರು ಬೆನ್ನಟ್ಟಿ ದನಗಳ್ಳರು ರಿಕ್ಷಾ ಬಿಟ್ಟು ಪರಾರಿಯಾದ ಘಟನೆ ಕೂಡ ನಡೆದಿತ್ತು. ಈ ಹಿನ್ನೆಲೆಯಲ್ಲಿ ಇದೀಗ ದನದ ಕಾಲುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಿದ ಘಟನೆ ಸ್ಥಳೀಯ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement