ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಎಂಡೋ ಸಂತ್ರಸ್ತರ ಸೌಲಭ್ಯ ಕಡತದಲ್ಲಿ ಮಾತ್ರ!

Rashmi Kasaragodu
Updated On : 1 Aug 2014, 1:44 am

ಉಪ್ಪಿನಂಗಡಿ: ಎಂಡೋ ಸಂತ್ರಸ್ತರಿಗೆ ಕಲ್ಪಿಸಿರುವ ಸೌಲಭ್ಯಗಳ ಕುರಿತು ಸರ್ಕಾರವೇ ಹೈಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿದೆ. ಇದು ಹೈಕೋರ್ಟ್ ನೇಮಿಸಿರುವ ಅಮಿಕಸ್ ಕ್ಯೂರಿ ಗಮನಕ್ಕೆ ಬಂದಿದೆ. ಸರ್ಕಾರದ ಸವಲತ್ತುಗಳು ಎಷ್ಟು ಪರಿಣಾಮಕಾರಿಯಾಗಿ ಸಂತ್ರಸ್ತರನ್ನು ತಲುಪಿದೆ ಎಂಬುದನ್ನು ಅರಿಯಲು ಅಮಿಕಸ್ ಕ್ಯೂರಿ ವೈಶಾಲಿ ಹೆಗ್ಡೆ ಗುರುವಾರ ಕೊಕ್ಕಡಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಎಂಡೋ ಹೋರಾಟಗಾರರಾದ ಶ್ರೀಧರ ಗೌಡ ಕೆಂಗುಡೇಲು, ಪೂವಾಜೆ ಕುಶಾಲಪ್ಪ ಗೌಡ ಮತ್ತು ಅನೇಕ ಸಂತ್ರಸ್ತರು ಮಾಹಿತಿ ನೀಡಿದರು. ಸರ್ಕಾರದ ಕಡೆಯಿಂದ ನ್ಯಾಯಾಲಯಕ್ಕೆ ಎಂಡೋ ಕುರಿತಾಗಿ ಕೈಗೊಂಡಿರುವ ಪರಿಹಾರ ಪಟ್ಟಿಯನ್ನು ವರದಿ ರೂಪದಲ್ಲಿ ನೀಡಲಾಗಿದೆ. ಗುರುತಿನ ಕಾರ್ಡ್ ವಿತರಣೆಯಲ್ಲಿ ಮಾತ್ರ ಶೇ. 80ರಷ್ಟು ಪ್ರಗತಿ. ಉಳಿದದ್ದು ಕಾಗದದಲ್ಲಿಯೇ ಉಳಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement