ಭೂ ಮಾಪಕರ ನೇಮಕಕ್ಕೆ ಪ್ರಮೋದ್ ಮಧ್ವರಾಜ್ ಆಗ್ರಹ
ಬ್ರಹ್ಮಾವರ: ಜಿಲ್ಲೆಯಲ್ಲಿ ಭೂಮಾಪಕರ ಹುದ್ದೆಗಳು ಖಾಲಿ ಇರುವುದರಿಂದ ಸಾಕಷ್ಟು ಪ್ರಕರಣಗಳು ಬಾಕಿಯಾಗಿದ್ದು, ತಕ್ಷಣ ಭೂಮಾಪಕರನ್ನು ನೇಮಿಸುವಂತೆ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಅವರು ಕಂದಾಯ ಸಚಿವ ವಿ. ಶ್ರೀನಿವಾಸ್ ಪ್ರಸಾದ್ಗೆ ದೂರವಾಣಿ ಕರೆ ಮಾಡಿ ಆಗ್ರಹಿಸಿದ್ದಾರೆ.
ಶಾಸಕರು ಬ್ರಹ್ಮಾವರ ವಿಶೇಷ ತಹಸೀಲ್ದಾರ್ ಕಚೇರಿಯಲ್ಲಿ ಹಲವಾರು ವರ್ಷಗಳಿಂದ ಬಾಕಿ ಇರುವ ಕಡತಗಳನ್ನು ಪರಿಶೀಲಿಸಿ ಸರ್ವೆಗೆ ಬಾಕಿ ಪ್ರಕರಣಗಳ ಮಾಹಿತಿ ಪಡೆದದರು.
ಈ ಸಂದರ್ಭದಲ್ಲಿ ಬಾಕಿ ಇರುವ 4000ಕ್ಕೂ ಹೆಚ್ಚು ಕಡತಗಳನ್ನು 1 ವರ್ಷದೊಳಗೆ ವಿಲೇವಾರಿ ಮಾಡಲು 30 ಹೆಚ್ಚುವರಿ ಭೂಮಾಪಕರ ಹುದ್ದೆಯನ್ನು ಸೃಷ್ಟಿಸಿ ಅವರನ್ನು ತಕ್ಷಣ ನೇಮಿಸುವಂತೆ ಕಂದಾಯ ಸಚಿವರಿಗೆ ಮನವಿ ಮಾಡಿದರು.
ಅಕ್ರಮ- ಸಕ್ರಮ ಅರ್ಜಿ ನೀಡುವ ಪ್ರಕ್ರಿಯೆಗೆ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಜನದಟ್ಟಣೆ ಕಡಿಮೆ ಮಾಡಲು ಹೆಚ್ಚುವರಿ ಕಂಪ್ಯೂಟರ್ ಒದಗಿಸುವುದರೊಂದಿಗೆ ಗ್ರಾಮೀಣ ಪ್ರದೇಶದ ಜನಗಳಿಗೆ ಗ್ರಾಮಗಳಲ್ಲಿ ಅನುಕೂಲವಾಗುವಂತೆ ಅಕ್ರಮ - ಸಕ್ರಮ ಅರ್ಜಿಗಳನ್ನು ಸ್ವೀಕರಿಸಲು ತಂತ್ರಾಶವನ್ನು ಗ್ರಾಮ ಪಂಚಾಯಿತಿ ಗಳಲ್ಲಿರುವ ಕಂಪ್ಯೂಟರಿನಲ್ಲಿ ಅಳವಡಿಸುವಂತೆ ಸಚಿವರಿಗೆ ಮನವಿ ಮಾಡಿದರು.