'ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ' ಬಹರೇನ್ ಪ್ರದರ್ಶನ
ಉಡುಪಿ: ತುಳು ಚಿತ್ರರಂಗದ ಇತಿಹಾಸದಲ್ಲಿ ತೆರೆ ಕಂಡ 50ನೇ ಸಿನಿಮಾ 'ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ' ಸಿನೆಮಾ ಇದೀಗ ಸಾಗರ ದಾಟಿ ಬಹರೇನ್ ದೇಶಕ್ಕೆ ತಲುಪಿದೆ. ಈ ತುಳು ಚಿತ್ರವು ಬಹರೇನ್‌ನ ಮನಮದಲ್ಲಿರುವ ಆನಾಲ್ ಎಂಬ ಚಿತ್ರಮಂದಿರದಲ್ಲಿ ಜೂ. 20ರಂದು ಮಧ್ಯಾಹ್ನ 3 ಗಂಟೆಗೆ ಪ್ರದರ್ಶನಗೊಳ್ಳಲಿದೆ.
ಬಹರೇನ್‌ನಲ್ಲಿರುವ ಭಾರತೀಯರು ಅದರಲ್ಲೂ ತುಳುವರಿಗಾಗಿಯೇ ಎಸ್.ಎನ್.ಡಿ.ಪಿ. ಬಹರೇನ್ ಎಂಬ ಸಂಘಟನೆ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ.
ತುಂಗಭದ್ರ ಫಿಲಂಸ್ ಬ್ಯಾನರ್‌ನಡಿ ರಾಜಶೇಖರ್ ಕೋಟ್ಯಾನ್ ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ ಈ ಚಿತ್ರಕ್ಕೆ ಪ್ರವೀಣ್ ಗೋಡ್ಕಿಂಡಿ ಅವರ ಸಂಗೀತ, ಚಂದ್ರಶೇಖರ್ ಸುವರ್ಣ ಅವರ ಕಥೆ ಹಾಗೂ ಸುಧಾಕರ ಬನ್ನಂಜೆ ಅವರ ಸಂಭಾಷಣೆ ಇದೆ. ತಾರಾಗಣದಲ್ಲಿ ವಿಜಯ ರಾಘವೇಂದ್ರ, ರಾಜಶೇಖರ್ ಕೋಟ್ಯಾನ್, ಸೂರ್ಯೋದಯ, ಸಚಿವ ಅಭಯಚಂದ್ರ ಜೈನ್, ತುಳು ಸಾಹಿತ್ಯ ಅಕಾಡಮಿ ಮಾಜಿ ಅದ್ಯಕ್ಷ ಉಮನಾಥ ಕೋಟ್ಯಾನ್, ಭೋಜರಾಜ್ ವಾಮಂಜೂರು ನಟಿಸಿದ್ದಾರೆ.