ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಭಜನ್ ಸಾಮ್ರಾಟ್ ಆಯ್ಕೆ ಪ್ರಕ್ರಿಯೆಗೆ ಚಾಲನೆ

Vishwanath S
Updated On : 12 Jun 2014, 11:26 am

ಉಡುಪಿ: ದಕ್ಷಿಣ ಭಾರತದ ಅತಿ ದೊಡ್ಡ ಆಧ್ಯಾತ್ಮಿಕ ಟಿ.ವಿ. ಚಾನೆಲ್ ಎಂದು ಹೆಸರಾಗಿರುವ ಶ್ರೀಶಂಕರ ವಾಹಿನಿಯ ಯಶಸ್ವಿ ರಿಯಾಲಿಟಿ ಶೋ ಭಜನ್ ಸಾಮಾಟ್ರ್ ಸೀಸನ್-3 ಇದರ ಆಯ್ಕೆ ಸುತ್ತಿನ ಸ್ಪರ್ಧೆಯು ಮಂಗಳವಾರ ಇಲ್ಲಿನ ರಥಬೀದಿಯಲ್ಲಿರುವ ರಾಘವೇಂದ್ರ ಮಠದ ಸಭಾಂಗಣದಲ್ಲಿ ನಡೆಯಿತು.
ಈ ಸ್ಪರ್ಧೆಗಳನ್ನು ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಮಾಧವ ಸುವರ್ಣ ಉದ್ಘಾಟಿಸಿ ಶುಭ ಹಾರೈಸಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ. ಶಿವಕುಮಾರ್, ಸಂಘಟನಾ ಕಾರ್ಯದರ್ಶಿ ಸುಂದರ ಜತ್ತನ್, ನಗರದ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ ಭಜನಾ ಮಂಡಳಿಯ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ತೀರ್ಪುಗಾರರಾಗಿ ಖ್ಯಾತ ಗಾಯಕಿ ಕುಸುಮಾ, ದಾಸ ಸಾಹಿತ್ಯ ಪ್ರಚಾರಕ ಹ.ರಾ. ನಾಗರಾಜ ಆಚಾರ್ಯ ಭಾಗವಹಿಸಿದ್ದರು. ಶ್ರೀಶಂಕರ ಟಿವಿಯ ಸಿ.ಆರ್.ಒ. ಪವನ್ ಎಸ್. ರಮೇಶ್, ವಿತರಣಾ ಪ್ರಮುಖ ವಿನಾಯಕ ಪೈ, ನಿರ್ದೇಶಕ ಜಯ್ ಆದಿತ್ಯ ಅತಿಥಿಗಳನ್ನು ಗೌರವಿಸಿದರು. ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಪ್ರತಿನಿಧಿ ಕೆ.ವಿ. ರಮಣ್ ನಿರೂಪಿಸಿ, ವಂದಿಸಿದರು.
ಜೂ. 12ರವರೆಗೆ ಆಡಿಶನ್ ನಡೆಯಲಿದ್ದು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ ವಿವಿಧ ತಂಡಗಳು ಭಾಗವಹಿಸುತ್ತಿವೆ. 16ರಿಂದ ಕೆಳಗೆ ಮತ್ತು 17- 45 ವರ್ಷ ವಯೋವಾನದ ಎರಡು ವಿಭಾಗಗಳಲ್ಲಿ ಆಯ್ಕೆ ನಡೆಯತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement