ಆರೋಗ್ಯ ಸಚಿವರ ಕ್ಷೇತ್ರದಲ್ಲಿ ಕಸದ ರಾಶಿ: ಸಾಂಕ್ರಾಮಿಕ ರೋಗ ಭೀತಿ
ಮಂಗಳೂರು: ರಸ್ತೆ ಬದಿ ಎಲ್ಲೆಂದರಲ್ಲಿ ಕಸದ ರಾಶಿ, ತೋಡಿನಲ್ಲಿ ಹೂಳು ತುಂಬಿದರೂ ಕೇಳುವವರಿಲ್ಲ...
ಇದು ದೇರಳಕಟ್ಟೆ, ನಾಟೆಕಲ್ಲು, ಕೊಣಾಜೆ ಪರಿಸರದಲ್ಲಿ ನಿತ್ಯ ಕಂಡುಬರುವ ಕಸದ ಯಾತನೆ. ಆರೋಗ್ಯ ಸಚಿವ ಯು.ಟಿ.ಖಾದರ್‌ರ ಈ ಕ್ಷೇತ್ರ ಅನಾರೋಗ್ಯ ಭೀತಿಯಲ್ಲಿದೆ.
ಮಂಗಳೂರು ತಾಲೂಕಿನ ದೇರಳಕಟ್ಟೆಯಲ್ಲಿ ರಸ್ತೆ ಬದಿಯಲ್ಲೇ ತ್ಯಾಜ್ಯ ಬಿಸಾಡುತ್ತಾರೆ. ವಾಹನದಲ್ಲಿ ಹೋಗುವವರು ಬಿಸಾಡುವುದರಿಂದ ಸಂಜೆ ವೇಳೆಗೆ ಕಸದ ರಾಶಿ. ನಾಟೆಕಲ್ಲಿನಲ್ಲೂ ಇದೇ ಸಮಸ್ಯೆ. ದೇರಳಕಟ್ಟೆಯಲ್ಲಿ ಕಸ ಬಿಸಾಡದಂತೆ ಬೆಳ್ಮ ಗ್ರಾಮ ಪಂಚಾಯ್ತಿ ಕೈಗೊಂಡ ಕ್ರಮ ಫಲಕಾರಿಯಾಗಿಲ್ಲ. ಬೆಳ್ಮ ಗ್ರಾಮ ಪಂಚಾಯ್ತಿ ಎದುರೇ ಕಸ ಎಸೆಯುತ್ತಾರೆ ಎಂದರೆ ಇನ್ನು ರಸ್ತೆ ಬದಿ ನಿಯಂತ್ರಿಸಲು ಹೇಗೆ ಸಾಧ್ಯ. ಕೊಣಾಜೆ ಗ್ರಾಮ ಪಂಚಾಯ್ತಿನಿಂದ ಎಚ್ಚರಿಕೆ ಫಲಕ ಹಾಕಿದ್ದಾರೆ. ಆದರೂ ಕಸ ಎಸೆಯುವುದು ನಿಂತಿಲ್ಲ. ಇದರ ಪತ್ತೆಗೆ ಕಾವಲುಗಾರನನ್ನು ನೇಮಿಸೋಣ ಎಂದರೆ ಯಾರೂ ಮುಂದೆ ಬರುತ್ತಿಲ್ಲ ಎಂದು ಕೈಚೆಲ್ಲುತ್ತಾರೆ ಪಂಚಾಯ್ತಿ ಅಧಿಕಾರಿಗಳು.
ಕೊಣಾಜೆಯಿಂದ ನಾಟೆಕಲ್ಲು ವರೆಗೆ ರಸ್ತೆ ಬದಿ ಕಸ ಮಾತ್ರವಲ್ಲ, ಪ್ರಾಣಿಗಳ ತ್ಯಾಜ್ಯವೂ ಸೇರಿ ಪರಿಸರ ದುರ್ನಾತ. ಮಳೆಗಾಲದಲ್ಲಿ ಮಳೆ ನೀರಿಗೆ ಕೊಚ್ಚೆ ಹರಿದು ಸಾಂಕ್ರಮಿಕ ರೋಗಕ್ಕೆ ಆಹ್ವಾನ ನೀಡುತ್ತಿದೆ. ಸಾಂಕ್ರಾಮಿಕ ರೋಗ ತಲೆದೋರುವ ಮುನ್ನ ಎಚ್ಚೆತ್ತುಕೊಳ್ಳುವಂತೆ ಅಧಿಕಾರಿಗಳ ಕಿವಿ ಹಿಂಡಿದರೂ ಪ್ರಯೋಜನ ಕಂಡುಬಂದಿಲ್ಲ. ಸಾರ್ವಜನಿಕರೂ ಇದರ ಬಗ್ಗೆ ಎಚ್ಚೆತ್ತುಕೊಂಡಿಲ್ಲ. ಮೂಡುಬಿದಿರೆ ಕ್ಷೇತ್ರ ವ್ಯಾಪ್ತಿಯ ಗಂಜಿಮಠ, ಕಂದಾವರಗಳಲ್ಲಿ ಕಸದ ಸಮಸ್ಯೆ ಅಷ್ಟಾಗಿ ಕಂಡುಬಂದಿಲ್ಲ.
ತ್ಯಾಜ್ಯ ಘಟಕಕ್ಕೂ ವಿರೋಧ: ಕೊಣಾಜೆಯಲ್ಲಿ 4 ಸೆಂಟ್ಸ್ ಜಾಗದಲ್ಲಿ ತ್ಯಾಜ್ಯ ವಿಲೇ ಘಟಕ ರಚನೆ ಸಾಧ್ಯವಾಗಿಲ್ಲ. ಸ್ಥಳೀಯರ ವಿರೋಧದಿಂದ ಪಂಚಾಯ್ತಿ ಘಟಕ ಸ್ಥಾಪನೆಯನ್ನು ಕೈಬಿಟ್ಟಿದೆ. ನಾಟೆಕಲ್ಲಿನಲ್ಲಿ ಕಸವಿಲೇವಾರಿ ವಾರಕ್ಕೊಮ್ಮೆ. ಹಾಗಾಗಿ ಅಲ್ಲಿವರೆಗೆ ದಿನಂಪ್ರತಿ ಡಂಪ್ ಆಗುವ ಕಸ ದುರ್ವಾಸನೆಯನ್ನು ಅನಿವಾರ್ಯವಾಗಿ ಸಹಿಸಲೇ ಬೇಕು. ಎನ್‌ಜಿಒ, ಆರೋಗ್ಯ ಇಲಾಖೆ ಸೇರಿ ಅಂಗಡಿಗಳಿಗೆ ತೆರಳಿ ಜಾಗೃತಿ ಮೂಡಿಸಿದರೂ ಹೇಳುವಂಥ ಪರಿಣಾಮ ಆಗಿಲ್ಲ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು.
ತೋಡಿನಲ್ಲಿ ಹೂಳು: “D×ÛÙÄ¥Ú ನಡುಹಿತ್ಲು ತೋಡಿನಲ್ಲಿ ಹೂಳು ತುಂಬಿ ಮಳೆನೀರು ಸರಾಗ ಹರಿಯಲು ತೊಡಕಾಗಿದೆ. 2 ತಿಂಗಳ ಹಿಂದೆಯಷ್ಟೇ ಇಲ್ಲಿ ಮೂರು ಮಂದಿ ಮಲೇರಿಯಾ ಚಿಕಿತ್ಸೆ ಪಡೆದಿದ್ದರು. ಸಮೀಪದ ನಾಲ್ಕೈದು ವಾರ್ಡ್‌ಗಳ ನೀರು ಈ ತೋಡಿನ ಮೂಲಕ ಹರಿಯುತ್ತದೆ. ತ್ಯಾಜ್ಯ ನೀರು ಶೇಖರಣೆಯಿಂದ ಇಲ್ಲಿಯೂ ಸಾಂಕ್ರಾಮಿಕ ರೋಗ ಭೀತಿ ತಪ್ಪಿಲ್ಲ. ಇದನ್ನು ಪುರಸಭೆ ಗಮನಕ್ಕೆ ತಂದರೂ ®ÚþæàÞd«ÚÈÛWÄÇ’ ಎನ್ನುತ್ತಾರೆ ಸ್ಥಳೀಯ ಸದಸ್ಯ ಪೊಡಿ ಮೋನು.
“D×ÛÙÄ¥ÚÆÇ ಅಗತ್ಯವಿರುವಲ್ಲಿ ಒಳಚರಂಡಿ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದೆ. ಹಳೆ ಚರಂಡಿ ಸಂಪರ್ಕವನ್ನು ಬದಲಾಯಿಸುವ ಕೆಲಸ ಆಗಬೇಕು. ಎಲ್ಲೆಡೆ ಪರಿಸರ ಸ್ವಚ್ಛತೆಗೆ ಗಮನ ನೀಡುವಂತೆ ಸೂಚಿಸಲಾಗಿದೆ. ಒಳಚರಂಡಿ ನಿರ್ವಹಣೆಗೆ ರು. 50 ಲಕ್ಷ ಬಿಡುಗಡೆಗೆ ಬಾಕಿ B¥æ’ ಎನ್ನುತ್ತಾರೆ ಪುರಸಭಾ ಮುಖ್ಯಧಿಕಾರಿ.
ಪಾಲಿಕೆಯೂ ಹೊರತಾಗಿಲ್ಲ: ಮಹಾನಗರ ಪಾಲಿಕೆ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಗೆದುಹಾಕಿದ ಜಾಗ, ರಸ್ತೆಬದಿ ಮಣ್ಣು ಅಥವಾ ಕಟ್ಟಡ ಪರಿಕರಗಳ ರಾಶಿ, ಚರಂಡಿ ಹೂಳೆತ್ತಿ ರಸ್ತೆ ಬದಿ ಹಾಗೆಯೇ ಬಿಡಲಾಗಿದೆ. ಕೋಡಿಕಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಕಸ ಬಿಸಾಡುವುದು, ನಗರ ಪಾಲಿಕೆಯ ಪ್ರಮುಖ ರಸ್ತೆಯ ಅಲ್ಲಲ್ಲಿ ಕಸ ಬಿಸಾಡುವುದು ಮುಂದುವರಿದೇ ಇದೆ. ಇದನ್ನು ಪೂರ್ತಿಯಾಗಿ ನಿಯಂತ್ರಿಸುವಲ್ಲಿ ಪಾಲಿಕೆ ಸೋತಿದೆ.