ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಶಿಕ್ಷಕರ ಗೌರವಿಸಿ: ಅದಮಾರು ಶ್ರೀ

Rashmi Kasaragodu
Updated On : 26 Jun 2014, 12:22 pm

ಉಡುಪಿ:  ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಹೆತ್ತವರ ಮತ್ತು ಶಿಕ್ಷಕರ ಪಾತ್ರ ಮಹತ್ವವಾದುದು. ಆದ್ದರಿಂದ ಹೆತ್ತವರನ್ನು ಮತ್ತು ಶಿಕ್ಷಕರನ್ನು ವಿದ್ಯಾರ್ಥಿಗಳು ಗೌರವದಿಂದ ಕಾಣಬೇಕು ಎಂದು ಉಡುಪಿ ಶ್ರೀ ಅದಮಾರು ಶಿಕ್ಷಣ ಮಂಡಳಿ ಅಧ್ಯಕ್ಷ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಪೂರ್ಣಪ್ರಜ್ಞ ಕಾಲೇಜು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಶಿಕ್ಷಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.  ಕಾಲೇಜಿನ ಗೌರವ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್ ಆಶಯ ಮಾತುಗಳನ್ನಾಡಿದರು. ಪ್ರಾಂಶುಪಾಲ ಸದಾಶಿವ ರಾವ್ ಅಧ್ಯಕ್ಷತೆ ವಹಿಸಿದ್ದರು.  ಉಪನ್ಯಾಸಕರಾದ ಸತ್ಯನಾರಾಯಣ, ಮಾಲತಿ, ಡಾ.ಎ.ಪಿ. ಭಟ್, ರಾಘವೇಂದ್ರ, ಪ್ರಕಾಶ್ ರಾವ್, ಡಾ. ಶ್ರೀಕಾಂತ್ ಸಿದ್ದಾಪುರ, ಡಾ.ಟಿ.ಎಸ್. ರಮೇಶ್, ಸುಕುಮಾರ್ ವಿವಿಧ ವಿಚಾರಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಉಪಪ್ರಾಂಶುಪಾಲ ಡಾ. ಜಗದೀಶ ಶೆಟ್ಟಿ ಸ್ವಾಗತಿಸಿ, ಡಾ. ಸುಕನ್ಯಾ ಮೇರಿ ವಂದಿಸಿದರು. ಮಂಜುನಾಥ ಕರಬ
ನಿರೂಪಿಸಿದರು.


ಅದಿತಿ ಗ್ಯಾಲರಿ ಉದ್ಘಾಟನೆ


ಉಡುಪಿ: ಇಲ್ಲಿನ ಅದಿತಿ ಟ್ರಸ್ಟ್ ವತಿಯಿಂದ ಕುಂಜಿಬೆಟ್ಟುನಲ್ಲಿ ನಿರ್ಮಿಸಲಾಗಿರುವ ನೂತನ ಅದಿತಿ ಗ್ಯಾಲರಿ ಇತ್ತೀಚೆಗೆ ಉದ್ಘಾಟಿಸಲಾಯಿತು. ಹಿರಿಯ ಕಲಾವಿದ ರಮೇಶ್, ಕಲಾ ವಿಮರ್ಶಕ ಎ. ಈಶ್ವರಯ್ಯ, ಶಿಕ್ಷಣ ತಜ್ಞ ಡಾ. ಮೋಹನ್ ಆಳ್ವ, 'ತರಂಗ' ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್. ಪೈ, 'ಉದಯವಾಣಿ' ವ್ಯವಸ್ಥಾಪಕ ಸಂಪಾದಕ ಸತೀಶ್ ಪೈ  ಉದ್ಘಾಟಿಸಿದರು. ಟ್ರಸ್ಟಿ ಅಧ್ಯಕ್ಷ ಡಾ. ಕಿರಣ್ ಆಚಾರ್ಯ, ಉಸ್ತುವಾರಿ ಪ್ರವೀಣಾ ಮೋಹನ್, ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement