ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಪತ್ನಿಯ ತವರಿಗಟ್ಟಿದ ಪತಿ; ಮಾತುಕತೆಗೆ ಬಂದ ಮನೆಯವರ ಮೇಲೆ ಹಲ್ಲೆ

Mainashree
Updated On : 5 Mar 2014, 10:09 am

ವಿಟ್ಲ: ಕೊಳ್ನಾಡು ಗ್ರಾಮದ ಸಾಲೆತ್ತೂರು ಎಂಬಲ್ಲಿ ವ್ಯಕ್ತಿಯೊಬ್ಬ ಪತ್ನಿಯನ್ನು ತವರಿಗೆ ಕಳುಹಿಸಿದ ವಿಚಾರವಾಗಿ ಪತ್ನಿಯ ಮನೆಯವರು ಪತಿ ಮನೆಗೆ ಮಾತುಕತೆಗೆ ತೆರಳಿದ್ದ ವೇಳೆ ನಾಲ್ವರ ತಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಗಾಯಗೊಂಡವರನ್ನು ವಿಟ್ಲಪಡ್ನೂರು ಗ್ರಾಮದ ಅಝೀಝ್ (35), ಹೈದರ್ (25), ಝಕರಿಯಾ, ರಝಾಕ್, ವಿಟ್ಲ ಕಸಬಾ ಗ್ರಾಮದ ಕೊಡಂಗೆ ನಿವಾಸಿ ರಫೀಕ್ ಎಂದು ಗುರುತಿಸಲಾಗಿದೆ. ಅವರೀಗ ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಡಂಬು ನಿವಾಸಿ ಹಸೈನಾರ್ ಎಂಬವರ ಪುತ್ರಿಯನ್ನು ಕೊಳ್ನಾಡು ಗ್ರಾಮದ ನಿವಾಸಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ಅಬ್ದುಲ್ ಬಶೀರ್ ಎಂಬಾತನಿಗೆ ಏಳು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಕೆಲ ವರ್ಷಗಳ ಬಳಿಕ ಬಶೀರ್ ಪತ್ನಿಯನ್ನು ತವರಿಗೆ ಕಳುಹಿಸಿದ್ದ ಎನ್ನಲಾಗಿದೆ. ಈ ಬಗ್ಗೆ ಎರಡೂ ಕುಟುಂಬಗಳ ನಡುವೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಹಲವು ಬಾರಿ ರಾಜಿ ಮಾತುಕತೆ ನಡೆಯಿತಾದರೂ ಕೊನೆಯ ಬಾರಿಯ ಮಾತುಕತೆಯಲ್ಲಿ ಪತ್ನಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗುವುದಾಗಿ ಬಶೀರ್ ತಿಳಿಸಿದ್ದ. ಆದರೆ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಿರಲಿಲ್ಲ ಎಂದು ಪತ್ನಿ ಮನೆಯವರು ಆರೋಪಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಬಶೀರ್ ವಿದೇಶಕ್ಕೆ ತೆರಳುವ ಸಿದ್ಧತೆಯಲ್ಲಿದ್ದ. ಪತ್ನಿಯ ಸಂಬಂಧಿಗಳಾದ ಹೈದರ್, ಅಝೀಝ್, ರಝಾಕ್, ಝಕಾರಿಯಾ ಹಾಗೂ ಸಹೋದರ ರಫೀಕ್ ಎಂಬವರು ಬಶೀರ್ ವಿದೇಶಕ್ಕೆ ತೆರಳುವುದನ್ನು ತಡೆಯಲು ತೆರಳಿದಾಗ ಮಹಿಳೆಯ ಮಾವ ಪುತ್ತಬ್ಬ ಹಾಗೂ ಅವರ ಪುತ್ರರಾದ ಪತಿ ಅಬ್ದುಲ್ ಬಶೀರ್, ನಿಝಾರ್ ಹಾಗೂ ಅಲಿ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ. ಕೊಡಂಗೆ ನಿವಾಸಿ ರಫೀಕ್ ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement