ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಉಪ್ಪಿನಂಗಡಿ: ಇಂದು ಮಹಾಕಾಳಿ ಮೆಚ್ಚಿ

Mainashree
Updated On : 7 Mar 2014, 10:43 am

ಉಪ್ಪಿನಂಗಡಿ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಮಹಾಕಾಳಿ ಮೆಚ್ಚಿ ಮಾ.7ರಂದು ರಾತ್ರಿ ನಡೆಯಲಿದೆ.
ನೇಮೋತ್ಸವ ಅಂಗವಾಗಿ ರಾತ್ರಿ ಭಕ್ತರಿಗೆ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ. ನೇತ್ರಾವತಿ- ಕುಮಾರಧಾರ ನದಿ ಸಂಗಮ ಸ್ಥಳದಲ್ಲಿನ ವೇದಿಕೆಯಲ್ಲಿ ಬಾಲಕೃಷ್ಣ ಮಂಜೇಶ್ವರ ಶಿಷ್ಯ ವೃಂದದಿಂದ ಭರತನಾಟ್ಯ ಕಾರ್ಯಕ್ರಮ, ಶ್ರೀದುರ್ಗಾ ಮ್ಯೂಸಿಕಲ್ಸ್ ಉಜಿರೆಯ ಶಿವಕುಮಾರ್ ಬಾರಿತ್ತಾಯ ತಂಡದಿಂದ ಭಕ್ತಿ ಸೌರಭ ಕಾರ್ಯಕ್ರಮ ನಡೆಯಲಿದೆ. ಪಾರಂಪರಿಕ ವೈಶಿಷ್ಟ್ಯತೆಯಿಂದ ಕೂಡಿದ ಮಹಾಕಾಳಿ ಮೆಚ್ಚಿಯಲ್ಲಿ ದೇವಕ್ರಿಯಾ ಶೈಲಿಯಲ್ಲಿ ನೇಮದ ವಿಧಿವಿಧಾನಗಳು ನಡೆಯುತ್ತವೆ. ನೇಮೋತ್ಸವದ ವಿಧಿ ವಿಧಾನಗಳನ್ನು ನೆರವೇರಿಸುವ ಕುಟುಂಬವು ದೇವಳ ಎರಡನೇ ಮಖೆ ಜಾತ್ರೆಯ ಮರು ದಿನದಿಂದ ನೇಮೋತ್ಸವ ಮುಗಿಯುವವರೆಗೆ ಉಪ್ಪಿನಂಗಡಿ ರಥ ಬೀದಿಯಲ್ಲಿನ ಗಣಪತಿ ಮಠದ ಬಳಿ ಇರುವ ದೇವರ ಕಟ್ಟೆಯಲ್ಲಿ ವಾಸ್ತವ್ಯ ಹೂಡಿ ನೇಮದ ಅಣಿ ಕಟ್ಟುವ ಕಾರ್ಯಗಳನ್ನು ನಡೆಸುತ್ತಾರೆ. ಈ ರೀತಿಯ ವಾಸ್ತವ್ಯ ತಲೆ ತಲಾಂತರಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ನಲಿಕೆ ಸಮುದಾಯದ ಮಂದಿ ದೇವಿಯ ನೇಮದ ಕಾರ್ಯ ನಡೆಸುತ್ತಿದ್ದು, ಅವರು ಮಂತ್ರಿಸಿದ ಕಪ್ಪುದಾರ ಕಟ್ಟಿಸಿಕೊಳ್ಳಲೆಂದೇ ಭಾರಿ ಸಂಖ್ಯೆಯ ಜನ ಆಗಮಿಸುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement