ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಶ್ರೀ ಮುಖ್ಯಪ್ರಾಣ ದೇವರ ಬ್ರಹ್ಮಕಲಶೋತ್ಸವ

Rashmi Kasaragodu
Updated On : 13 Mar 2014, 12:18 pm

ಉಡುಪಿ: ಪಡುಬಿದ್ರಿ ಸಮೀಪದ ಪಲಿಮಾರು ಶ್ರೀ ಮುಖ್ಯಪ್ರಾಣ ದೇವರ ಬ್ರಹ್ಮಕಲಶೋತ್ಸವ, ಶ್ರೀಯೋಗದೀಪಿಕಾ ವಿದ್ಯಾಪೀಠದ ರಜತೋತ್ಸವ ಏ.16ರ ತನಕ ನಡೆಯಲಿದೆ ಎಂದು ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ತಿಳಿಸಿದ ಅವರು 13ರಂದು ಬೆಳಗ್ಗೆ 9.30ಕ್ಕೆ ರಜತದ್ವಾರ ಉದ್ಘಾಟನೆ, 10.30ಕ್ಕೆ ಪುರೋಹಿತ ಗೋಷ್ಠಿ ಹಾಗೂ ಸಂಜೆ 5 ರಿಂದ ಈಶ- ದೇಶ ದೇವಸ್ಥಾನ ಧರ್ಮದರ್ಶಿಗಳ ಸಭೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ದಿಕ್ಸೂಚಿ ಭಾಷಣ ನಡೆಯಲಿದೆ ಎಂದಿದ್ದಾರೆ. 14ರಂದು ವಿದ್ಯಾಭಂಡಾರ ಗ್ರಂಥಾಲಯ ಉದ್ಘಾಟನೆ, ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸಂತ- ಸಮ್ಮೇಳನ, 15 ರಂದು ಮುಖ್ಯಪ್ರಾಣ ದೇವರಿಗೆ ಬ್ರಹ್ಮಕಲಶಾಭಿಷೇಕ, ಸುವರ್ಣ ಕವಾಚ ಸಮರ್ಪಣೆ ನಡೆಯಲಿದೆ. 16 ಕ್ಕೆ ದಾಸಸಾಹಿತ್ಯ ಗೋಷ್ಠಿ, ಮಂಗಳ ಮಹೋತ್ಸವ ನಡೆಯಲಿದೆ. ಈ 5 ದಿನಗಳ ಕಾಲ ನಡೆಯುವ ಈ ಧಾರ್ಮಿಕ ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement