ದೊಂಡೇರಂಗಡಿ: 'ಸೀತಾ ಕಲ್ಯಾಣ' ಮಹೋತ್ಸವ
ಪೆರ್ಡೂರು: ಇಲ್ಲಿಗೆ ಸಮೀಪದ ದೊಂಡೇರಂಗಡಿ ಗ್ರಾಮದ ಶ್ರೀರಾಮ ಮಂದಿರದ ರಜತ ಮಹೋತ್ಸವ ಅಂಗವಾಗಿ ಸೀತಾ ಕಲ್ಯಾಣ ಮಹೋತ್ಸವವನ್ನು ಇತ್ತೀಚೆಗೆ ನಡೆಸಲಾಯಿತು. ಧಾರ್ಮಿಕ ಪೂಜಾ ವಿಧಾನಗಳು ವೇ.ಮೂ. ಕಾಶೀನಾಥ್ ಭಟ್ ಕಲ್ಯಾಣಪುರ ಮಾರ್ಗದರ್ಶನದಲ್ಲಿ ನಡೆಯಿತು.
ವರನ ಕಡೆಯಿಂದ (ಶ್ರೀರಾಮ ದೇವರ ಪರವಾಗಿ) ಕೃಷ್ಣ ಶೆಣೈ ಕುಟುಂಬಸ್ಥರು, ವಧುವಿನ ಕಡೆಯಿಂದ (ಸೀತಾ ದೇವಿಯ ಪರವಾಗಿ) ಪ್ರಕಾಶ್ ಕಿಣಿ ಕುಟುಂಬಸ್ಥರು ಸೇವಾದಾರರಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಸಂಜೆಯ ಗೋಧೂಳಿ ಮುಹೂರ್ತದಲ್ಲಿ ಸೀತಾ ಕಲ್ಯಾಣ ಮಹೋತ್ಸವ ನಡೆಯಿತು. ಸುಮಾರು 2000 ಭಕ್ತರು ಪಾಲ್ಗೊಂಡರು.
ಶ್ರೀರಾಮ ಮಂದಿರದ ಆಡಳಿತ ಮೊಕ್ತೇಸರ ಜಯರಾಮ್ ನಾಯಕ್, ನಿತ್ಯ ಅರ್ಚಕ ರಾಘವೇಂದ್ರ ನಾಯಕ್, ಸ್ಥಳೀಯ ಗಣ್ಯರಾದ ಯೋಗೀಶ್ ಮಲ್ಯ, ರಘುವೀರ್ ಶೆಣೈ, ಮೂಡಲಗಿರಿ ನಾಯಕ್, ಸೀತಾ ಬಾಯಿ, ಕಮಲಾಕ್ಷ ಕಿಣಿ, ಹರೀಶ್ ಕಿಣಿ, ಶಿವಾನಂದ ಭಟ್, ಗಣೇಶ್ ಭಟ್ ಮತ್ತು ಶ್ರೀ ರಾಮ ಸೇವಾ ಸಂಘದ ಸದಸ್ಯರು, ಶ್ರೀರಾಮ ಸೇವಾ ಮಹಿಳಾ ಮಂಡಳಿ ಮತ್ತು ಬಾಲ ಮಂಡಳಿಯ ಸದಸ್ಯರು ಇದ್ದರು.
ಸೀತಾ ಕಲ್ಯಾಣ ಮಹೋತ್ಸವದ ಮಹತ್ವವನ್ನು ಸೀತಾರಾಮ ಭಟ್ ಕಲ್ಯಾಣಪುರ ಮತ್ತು ರಮಾನಂದ ಭಟ್ ಮೂಲ್ಕಿ ತಿಳಿಸಿದರು.