ಹಳೆ ಹರಕೆ ತೀರಿಸಿದ ಬಿಎಸ್ವೈ
ಉಡುಪಿ: ಈ ಹಿಂದೆ ತಮ್ಮ ಅಭಿಮಾನಿಗಳು ತಾವು ಮುಖ್ಯಮಂತ್ರಿಯಾಗುವಂತೆ ಹಾರೈಸಿ ಉಡುಪಿ ತಾಲೂಕಿನ ಉಪ್ಪೂರು ಗ್ರಾಮದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಹೇಳಿಕೊಂಡಿದ್ದ ಹರಕೆಯನ್ನು ಸ್ವತಃ ಬಿ.ಎಸ್. ಯಡಿಯೂರಪ್ಪ ಬುಧವಾರ ಈಡೇರಿಸಿದರು. ಹರಕೆಯಂತೆ 108 ತೆಂಗಿನಕಾಯಿ ಗಣಹೋಮ ಮತ್ತು 10,008 ತೆಂಗಿನಕಾಯಿ ಮೂಡುಗಣಪತಿ ಸೇವೆ ನೆರವೇರಿಸಲಾಯಿತು.