ಎಸ್ಡಿಎಂ ಶಿಕ್ಷಣ ಸಂಸ್ಥೆ ದೇಶಕ್ಕೆ ಮಾದರಿ: ಕಾರಜೋಳ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವಿರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು ದೇಶಕ್ಕೆ ಮಾದರಿ. ಅವರ ಸಂಸ್ಥೆಗಳಲ್ಲಿ ಶಿಸ್ತು ಪರಿಪಾಲನೆ, ಸಮಯ ಪ್ರಜ್ಞೆ, ಮುಖಂಡತ್ವ, ಬೆಳೆಸುವಿಕೆ, ಪಠ್ಯ ವಿಷಯಗಳೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಆಟೋಟ ಸ್ಪರ್ಧೆಗಳು, ಸಾಂಸ್ಕೃತಿಕ ಚಟುವಟಿಕೆಗಳಾದ ಚಟುವಟಿಕೆಗಳು ಸರಿಸಮಾನವಾಗಿ ನಡೆಯುತ್ತಿರುತ್ತದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.
ಉಜಿರೆಯ ಪ್ರಕೃತಿ ಚಿಕಿತ್ಸಾ ಕಾಲೇಜಿನ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಶನಿವಾರ ಮಾತನಾಡಿದರು.ಪ್ರಾಚಾರ್ಯ ಡಾ. ಪ್ರಶಾಂತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಡಾ. ಪ್ರಭಾಶಕುಮಾರ ಇದ್ದರು. ಯೋಗ ವಿಭಾಗ ಡೀನ್ ಡಾ. ಶಿವಪ್ರಸಾದ ಶೆಟ್ಟಿ ಸ್ವಾಗತಿಸಿದರು. ಡಾ. ಸುಜಾತಾ ವಂದಿಸಿದರು. ಜಾಸ್ಮಿನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.
ಬಳ್ಳಮಂಜ ದೇವಳದ ಬ್ರಹ್ಮಕಲಶೋತ್ಸವ ನಾಳೆಯಿಂದ
ಬೆಳ್ತಂಗಡಿ: ಇಲ್ಲಿನ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ 14 ವರ್ಷದ ಬಳಿಕ ಮೇ 5 ರಿಂದ 11 ರವರೆಗೆ ಬ್ರಹ್ಮಕಲಶೋತ್ಸವ ಹಾಗೂ ಮೇ 14 ರಿಂದ 23 ರವರೆಗೆ ವಾರ್ಷಿಕ ಜಾತ್ರೆ ನಡೆಯಲಿದೆ ಎಂದು ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಡಾ.ಎಂ. ಹರ್ಷ ಸಂಪಿಗೆತ್ತಾಯ ತಿಳಿಸಿದರು. ಅವರು ಮಂಗಳವಾರ ದೇವಳದ ವಠಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇತಿಹಾಸ ಪ್ರಸಿದ್ಧ ಪುರಾತನ ನಾಗಾಲಯಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಬಳ್ಳಮಂಜದ ಶ್ರೀ ಅನಂತೇಶ್ವರ ದೇವರ ಸನ್ನಿಧಾನದಲ್ಲಿ ನೂತನ ಸುತ್ತು ಪೌಳಿಯ ಸಮರ್ಪಣೆ, ವ್ಯಾಘ್ರ ಚಾಮುಂಡಿ ದೈವದ ಪುನಃ ಪ್ರತಿಷ್ಠೆ ಸಹಿತ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ತಿಳಿಸಿದರು. ದೇವಳದ ದೇರೇಬೈಲು ಹರಿಕೃಷ್ಣ ತಂತ್ರಿವರೇಣ್ಯರ ನೇತೃತ್ವದಲ್ಲಿ 7 ದಿನಗಳ ನಾಗತನುಮಂಡಲ ತರ್ಪಣ ಪೂಜೆ, ಅಥರ್ವಶೀರ್ಷ ಗಣಯಾಗ, ರುದ್ರಯಾಗ, ಚಂಡಿಕಾಯಾಗ, ವಿಷ್ಣುಯಾಗಗಗಳಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ವಿನಂತಿಸಿದರು.
ಗೋಕಳವು ಇಸ್ಲಾಂ ವಿರೋಧಿ:
ಮುಸ್ಲಿಂ ಮುತೈದ ಮಹಾಝ್
ಮಂಗಳೂರು: ಗೋವು ಕಳ್ಳತನ ಧರ್ಮ ವಿರೋಧಿ. ಎಲ್ಲ ಮುಸ್ಲಿಮರು ಕಟುವಾಗಿ ವಿರೋಧಿಸಬೇಕು. ಶೀಘ್ರದಲ್ಲಿ ಈ ಕುರಿತು ಎಲ್ಲ ಜಮಾತ್ಗಳಿಗೂ ನಿರ್ದೇಶನ ನೀಡುವುದಾಗಿ ಮುಸ್ಲಿಂ ಮತ್ತೈದ ಮಹಾಝ್ ರಾಜ್ಯಾಧ್ಯಕ್ಷ ಮಸೂದ್ ಅಬ್ದುಲ್ ಖಾದರ್ ಹೇಳಿದ್ದಾರೆ. ತನಿಕೋಡು ಎನ್ಕೌಂಟರ್ಗೆ ಬಲಿಯಾದ ಕೃಷ್ಣಾಪುರದ ಕಬೀರ್ನ ಕುಟುಂಬಕ್ಕೆ 1 ಲಕ್ಷ ನೀಡಿದ ಬಳಿಕ ಸುದ್ದಿಗಾರರ ಜತೆಮಾತನಾಡಿದರು. ಶಾಸಕ ಮೊಯ್ದಿನ್ ಬಾವ ಇದ್ದರು. ಎಲ್ಲ ಧರ್ಮಗಳು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಎಲ್ಲವನ್ನು ಮಾನವೀಯ ನೆಲೆಯಲ್ಲಿನೋಡಬೇಕು. ಕದ್ದು ತಂದ ದನದ ಮಾಂಸವನ್ನು ತಿನ್ನುವುದನು ಇಸ್ಲಾಂ ವಿರೋಧಿಸುತ್ತದೆ. ಗೋಕಳ್ಳರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೆತ್ತಿಕೊಳ್ಳಬೇಕು ಎಂದರು