ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ತನಿಕೋಡು ಶೂಟೌಟ್ ಪ್ರಕರಣ; ಸರ್ಕಾರದ ನಿಲವಿಗೆ ಜನಜಾಗೃತಿ ಸಮಿತಿ ಖಂಡನೆ

Mainashree
Updated On : 7 May 2014, 10:12 am

ಉಡುಪಿ: ಶೃಂಗೇರಿ ತಾಲೂಕಿನ ತನಿಗೋಡು ಎಂಬಲ್ಲಿ ಶೂಟೌಟ್ ಪ್ರಕರಣದಲ್ಲಿ ಸತ್ತ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಕಬೀರ್ ಮುಸ್ಲಿಂ ಎಂಬ ಕಾರಣಕ್ಕೆ ಆತನನ್ನು ಸರ್ಕಾರ ವೈಭವೀಕರಿಸಿ, ಕರ್ತವ್ಯ ದಕ್ಷತೆ ಮೆರೆದ ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಸಿಬ್ಬಂದಿ ನವೀನ್ ನಾಯ್ಕ್‌ಗೆ ಬೆಲೆ ಕೊಡದಿರುವುದು ಖಂಡನೀಯ ಎಂದು ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕಾರರಾದ ಗುರುಪ್ರಸಾದ್ ಹೇಳಿದ್ದಾರೆ. ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಹಗಲು ರಾತ್ರಿ ಜೀವವನ್ನು ಪಣಕ್ಕಿಟ್ಟು ಕರ್ತವ್ಯ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಕಬೀರ್ ಪೊಲೀಸರನ್ನು ನೋಡಿ ತಪ್ಪಿಸಿ ಓಡಿ ಹೋಗುತ್ತಿದ್ದಾಗ ಅವನ ಮೇಲೆ ಗುಂಡು ಹಾರಿಸಿದ್ದು ಅವರ ಕರ್ತವ್ಯದ ಭಾಗವೇ ಆಗಿದೆ. ಇದರಲ್ಲಿ ಪೊಲೀಸರ ತಪ್ಪಿಲ್ಲ ಎಂದು ಗುರುಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಮೃತಪಟ್ಟವನು ಮುಸ್ಲಿಂ ಎಂಬ ಕಾರಣಕ್ಕೆ ಆತನ ಕುಟುಂಬಕ್ಕೆ ರು.5 ಲಕ್ಷ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದೆ. ಇದಕ್ಕೆ ಕೆಲವು ರಾಜಕೀಯ ನಾಯಕರು ಬೆಂಬಲಿಸಿದ್ದಾರೆ. ಉಳ್ಳಾಲದಲ್ಲಿ ಹಿಂದೂಗಳ ಮೇಲೆ ಅಲ್ಪಸಂಖ್ಯಾತರು ಹಲ್ಲೆ ನಡೆಸಿದಾಗ ಯಾರೂ ಹಿಂದೂಗಳಿಗೆ ಪರಿಹಾರ ನೀಡಲು ಮುಂದೆ ಬರಲಿಲ್ಲ. ಇದು ಸರ್ಕಾರದ ಮಲತಾಯಿ ಧೋರಣೆಯಾಗಿದೆ ಎಂದವರು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement