ಸಂಸ್ಕೃತ ಕಾಲೇಜ್ ಪ್ರವೇಶ ಆರಂಭ
ಉಡುಪಿ: ಇಲ್ಲಿನ ಎಸ್.ಎಂ.ಎಸ್.ಪಿ. ಸಂಸ್ಕೃತ ಮಹಾಪಾಠ ಶಾಲೆಯ 2014- 15ನೇ ಸಾಲಿನ ಕಾವ್ಯ, ಸಾಹಿತ್ಯ ಹಾಗೂ ವಿದ್ವತ್ ತರಗತಿಗಳು ಜೂ. 1ರಿಂದ ಪ್ರಾರಂಭವಾಗಲಿದೆ. ಸಂಸ್ಕೃತ ಭಾಷೆಯೊಂದಿಗೆ ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಸಾಹಿತ್ಯ ಮೊದಲ ವರ್ಷಕ್ಕೂ, ಪಿಯುಸಿ ಆದವರಿಗೆ ದ್ವೈತ ವೇದಾಂತ, ಜ್ಯೋತಿಷ, ಅಲಂಕಾರ, ನವೀನ ನ್ಯಾಯ, ವಿದ್ವತ್ ಮಾಧ್ಯಮ ತರಗತಿಗಳ ಮೊದಲ ವರ್ಷಕ್ಕೂ ಸೇರಲು ಅವಕಾಶವಿರುತ್ತದೆ. ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಊಟ ಹಾಗೂ ವಸತಿಯ ಸೌಕರ್ಯವನ್ನು ಒದಗಿಸಲಾಗುವುದು. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಕಚೇರಿಯನ್ನು ಅಥವಾ ದೂ. 0820-2521441, ಮೊ. 9449330570.