ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಫೋಕಸ್ ರಾಘುಗೆ ಅಂತಾರಾಷ್ಟ್ರೀಯ ಪ್ರಶಸ್ತಿ

Rashmi Kasaragodu
Updated On : 16 May 2014, 12:07 pm

ಉಡುಪಿ: ನಾಡಿನ ಉದಯೋನ್ಮುಖ ವನ್ಯಜೀವಿ-ಪ್ರಕೃತಿ ಛಾಯಾಚಿತ್ರಗ್ರಾಹಕ ಫೋಕಸ್ ರಾಘು (ರಾಘವೇಂದ್ರ ಕೊಡಂಗಳ) ಅವರಿಗೆ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಪಶ್ಚಿಮ ಬಂಗಾಳದ ರಾಣಿಗಂಜ್ ಫೋಟೋ ಸರ್ಕಲ್ ಆಯೋಜಿಸಿದ್ದ 'ಫಸ್ಟ್ ಇಂಪ್ರೆಷನ್' ಎಂಬ ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನದಲ್ಲಿ ರಾಘು ಅವರು ಉಡುಪಿಯ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಕ್ಲಿಕ್ಕಿಸಿದ ಛಾಯಾಚಿತ್ರಕ್ಕೆ 'ಬೆಸ್ಟ್ ಕ್ಯಾಂಡೀಡ್' ಪ್ರಶಸ್ತಿ ಲಭಿಸಿದೆ. ಅಲ್ಲದೇ ಈ ಸ್ಪರ್ಧೆಯಲ್ಲಿ ರಾಘು ಅವರ ಅತೀ ಹೆಚ್ಚು ಛಾಯಾಚಿತ್ರಗಳು ಸ್ಪರ್ಧೆಗೆ ಸ್ವೀಕೃತಗೊಂಡು 'ಬೆಸ್ಟ್ ಇಂಡಿಯನ್ ಎಂಟ್ರೆಂಟ್' ಎಂಬ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ. ಉಡುಪಿಯ ಖ್ಯಾತ ಛಾಯಾಚಿತ್ರಗ್ರಾಹಕ ಗುರುದತ್ ಕಾಮತ್ ಅವರ ಶಿಷ್ಯ ರಾಘು ಅವರು ತಮ್ಮ ವನ್ಯಜೀವಿ, ಜನಜೀವನ, ಪ್ರಕೃತಿ ಛಾಯಾಚಿತ್ರಗಳಿಗೆ ಈಗಾಗಲೇ ಹಲವು ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದು, ಇದೀಗ 9ನೇ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement