'ಆಳ್ವಾಸ್ ಪ್ರಗತಿ' ಉದ್ಯೋಗ ಮೇಳ ಜೂ. 14, 15ರಂದು
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯುವ 5ನೇ ವರ್ಷದ 'ಆಳ್ವಾಸ್ ಪ್ರಗತಿ-2014' ಉದ್ಯೋಗ ಮೇಳ ಜೂನ್ 14, 15ರಂದು ವಿದ್ಯಾಗಿರಿಯ ಆಳ್ವಾಸ್ ಪದವಿ ಕಾಲೇಜಿನಲ್ಲಿ ನಡೆಯಲಿದೆ.
ಸುಮಾರು 200ಕ್ಕೂ ಹೆಚ್ಚಿನ ಕಂಪೆನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಪ್ರತಿಷ್ಠಿತ ಕಂಪೆನಿಗಳಾದ ಟೈಟಾನ್, ವೀಡಿಯೋಕಾನ್, ಓರ್ಯಾಕಲ್, ಐಬಿಎಂ, ಯುಎಇ ಎಕ್ಸ್‌ಚೇಂಜ್, ಎನ್‌ಎಂಸಿ, ನಾರಾಯಣ ಹೃದಯಾಲಯ, ಬಟೋಕಾನ್, ಆದಿತ್ಯ ಬಿರ್ಲಾ ಗ್ರೂಪ್, ಟೆಕ್‌ಮಹೀಂದ್ರ, ಗೋದ್ರೆಜ್, ಐಟಿಸಿ, ಕಿರ್ಲೋಸ್ಕರ್ ಇಲೆಕ್ಟ್ರಿಕ್ಸ್, ಎಲ್ ಆ್ಯಂಡ್ ಟಿ, ತಾಜ್ ಗ್ರೂಪ್, ಐಸಿಐಸಿಐ ಬ್ಯಾಂಕ್, ವಿಪ್ರೋ, ಟಿವಿಎಸ್, ಆಲ್‌ಕಾರ್ಗೋ, ಎಕ್ಸ್‌ಚೇಂಜಿಂಗ್, ಏಜೀಸ್ ಮತ್ತಿತರರ ಕಂಪೆನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉದ್ಯೋಗಮೇಳದಲ್ಲಿ ಭಾಗವಹಿಸುವವರಿಗೆ ನೋಂದಣಿ ಉಚಿತವಾಗಿದ್ದು. ಆನ್‌ಲೈನ್‌ನಲ್ಲೂ ನೋಂದಣಿ ಮಾಡಬಹುದಾಗಿದೆ. ಢಿಢಿಢಿ.ಛಟಢಛಡಠ್ಠಛ್ಜಛಡ್ಝಿ.್ಛ್ಟಟನಲ್ಲಿ ನೋಂದಣಿ ಮಾಡಬಹುದು.
ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಗೆ ತಮ್ಮ ವಿದ್ಯಾರ್ಹತೆಕೆ ತಕ್ಕ ಕಲರ್ ಕಾರ್ಡ್ ಕೊಡಲಾಗುತ್ತದೆ. ಇದು ತಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ದೊರಕಲು ಸಹಾಯಕವಾಗಿರುತ್ತದೆ. ಉದ್ಯೋಗ ಮೇಳದಲ್ಲಿ 200ಕ್ಕೂ ಹೆಚ್ಚು ಸಲಹೆಗಾರರರನ್ನು ಉದ್ಯೋಗಾಕಾಂಕ್ಷಿಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲು ವಿಶೇಷವಾಗಿ ನೇಮಸಲಾಗಿರುತ್ತದೆ.
ಉದ್ಯೋಗಮೇಳದಲ್ಲಿ ಲಭ್ಯವಿರುವ ಎಲ್ಲ ಹುದ್ದೆಗಳ ಬಗ್ಗೆ ಪೂರ್ಣ ಮಾಹಿತಿಯನ್ನು ಕ್ಲ್ಯಾರಿಟಿ ವಾಲ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಪದವೀಧರರಿಗೆ ಹಾಗೂ ನರ್ಸಿಂಗ್ ಪದವೀಧರರು, ಐಟಿಟಿ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಈ ಮೇಳದಲ್ಲಿ ಉತ್ತಮ ಅವಕಾಶವಿದ್ದು, ವಿದೇಶಿ ಕಂಪೆನಿಗಳೂ ಭಾಗವಹಿಸುತ್ತಿವೆ.
ಉದ್ಯೋಗಾಕಾಂಕ್ಷಿಗಳು ಈ ಕುರಿತು ಹೆಚ್ಚಿನ ಮಾಹಿತಿಗೆ 9611686148, 9008907716, 9844667337, 9902625932 ಹಾಗೂ 08258-262706 ಅಥವಾ ಇ-ಮೇಲ್: ಛಟಢಛಡಠ್ಠಛ್ಜಛಡ್ಝಿ10ಅ್ಜಟಛ್ಝಟ.್ಛ್ಟಟ ಅಥವಾ ್ಝಟಿಜ್ಟಿಅಛಟಢಛಡಠ್ಠಛ್ಜಛಡ್ಝಿ.್ಛ್ಟಟ ಇಲ್ಲಿ ಸಂಪರ್ಕಿಸಬಹುದು.
ಉದ್ಯೋಗ ಮೇಳದಲ್ಲಿ ಭಾಗವಹಿಸುವವರು ಪಾಸ್‌ಪೋರ್ಟ್ ಸೈಜ್‌ನ ಭಾವಚಿತ್ರ ಮತ್ತು ಸ್ವವಿವರಗಳ 5ರಿಂದ 10 ಪ್ರತಿಗಳು, ಎಲ್ಲ ಅಂಕಪಟ್ಟಿಗಳ ಜೆರಾಕ್ಸ್ ಪ್ರತಿ, ಆನ್‌ಲೈನ್‌ನಲ್ಲಿ ನೋಂದಣಿ ಮಾಡಿದ್ದರೆ ಅದರ ಸಂಖ್ಯೆಯೊಂದಿಗೆ ಜೂ.14, 15ರಂದು ಬೆಳಗ್ಗೆ 8.30ರೊಳಗೆ ವಿದ್ಯಾಗಿರಿಯ ಆಳ್ವಾಸ್ ಪದವಿ ಕ್ಯಾಂಪಸ್‌ನಲ್ಲಿ ಹಾಜರಿರಬೇಕು ಎಂದರು.