ಅಡಕೆ ಮರ ಏರುವ ಯಂತ್ರದ ಪ್ರಾತ್ಯಕ್ಷಿಕೆ
ಬಂಟ್ವಾಳ: ಇಡ್ಕಿದು ಸೇವಾ ಸಹಕಾರಿ ಸಂಘ ಮತ್ತು ಅಮೃತ ಸಿಂಚನ ರೈತ ಒಕ್ಕೂಟ ನೇತೃತ್ವದಲ್ಲಿ ಅಡಕೆ ಮರ ಏರುವ ಯಂತ್ರದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ವಠಾರ ತೋಟದಲ್ಲಿ ನಡೆಯಿತು.
ಅಡಕೆ ಮತ್ತು ತೆಂಗಿನ ಮರ ಏರುವ ವಿಧಾನವನ್ನು ಇದೇ ಸಂದರ್ಭದಲ್ಲಿ ನಿರ್ವಾಹಕ ಕೊಯಮುತ್ತೂರು ಕೃಷಿಕ ವೆಂಕಟ ದಾಮೋದರ ನಾಯ್ಕ ಸ್ವತಃ ಮರ ಏರುವ ಮೂಲಕ ತೋರಿಸಿಕೊಟ್ಟರು.
ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಕಾ.ನಿ. ಅಧಿಕಾರಿ ಈಶ್ವರ ನಾಯ್ಕ, ನಿರ್ದೇಶಕ ಪಿ. ಭುಜಂಗ ಗೌಡ, ದೇವಸ್ಥಾನದ ಆಡಳಿತದಾರ ಸುರೇಶ ಕೆ.ಎಸ್. ಮುಕ್ಕುಡ, ಟ್ರಸ್ಟಿ ಪಿ. ರಾಜಾರಾಮ ಶೆಟ್ಟಿ ಕೋಲ್ಪೆ, ಪ್ರಪುಲ್ಲಚಂದ್ರ, ಪ್ರಗತಿಪರ ಕೃಷಿಕ ತಿಮ್ಮಪ್ಪ ಸಪಲ್ಯ ದೇವಸ್ಯ, ಕ್ಯಾಂಪ್ಕೋ ಮೆನೇಜರ್ ಕೊಂಕೋಡಿ ಸುಬ್ರಾಯ ಭಟ್, ಕೆ.ಎಂ. ತಿರುಮಲೇಶ್ವರ ಭಟ್ ಉಪಸ್ಥಿತರಿದ್ದರು.
ಸೋಮನಾಥ ಕುಲಾಲ್, ವಾಸು ಸಪಲ್ಯ ಕೋಲ್ಪೆ, ಬಾಲ ಸುಬ್ರಹ್ಮಣ್ಯ ಶರ್ಮ, ಈಶ್ವರ ಗೌಡ, ಪದ್ಮನಾಭ ಸಪಲ್ಯ ಸ್ವತಃ ಮರ ಏರುವ ತರಬೇತಿ ಪಡೆದರು.ಸಂಸ್ಥೆಯ ಕರ್ನಾಟಕ ವಿತರಣಾ ಪ್ರತಿನಿಧಿ ಕಾಡೂರು ರಾಜರಾಮ ನೇತೃತ್ವದಲ್ಲಿ ಪ್ರಾತ್ಯಕ್ಷಿಕೆ ಸಂಯೋಜಿಸಲಾಗಿತ್ತು.