ಶಾಲೆಗೆ ಮೇಜು, ಕುರ್ಚಿ ವಿತರಣೆ
ಕಾರವಾರ: ಸದಾಶಿವಗಡ ಲಯನ್ಸ್ ಕ್ಲಬ್ನಿಂದ ತಾಲೂಕಿನ ಗ್ರಾಮಿಣ ಪ್ರದೇಶವಾದ ದೇವಳಮಕ್ಕಿ ಆದರ್ಶ ವಿದ್ಯಾಲಯಕ್ಕೆ ಟೇಬಲ್ ಮತ್ತು ಕುರ್ಚಿಗಳನ್ನು ವಿತರಿಸಲಾಯಿತು. ಟೇಬಲ್ ನೀಡಿದ ಲಯನ್ಸ್ ಕ್ಲಬ್ ಚಾರ್ಟರ್ಡ್ ಪ್ರೆಸಿಂಡೆಂಟ್ ಡಾ ಮಹೇಶ ಗೋಳಿಕಟ್ಟೆ ಮಾತನಾಡಿ, ಗ್ರಾಮಿಣ ಭಾಗದ ಶೈಕ್ಷಣಿಕ ಹಸಿವನ್ನು ತಣಿಸಲು ಹುಟ್ಟಿರುವ ಈ ಶಾಲೆ ಉತ್ತಮ ಸಾಧನೆ ಮಾಡುತ್ತಿದೆ. ಇಂತಹ ಜ್ಞಾನ ದೇಗುಲಕ್ಕೆ ನಮ್ಮ ಕ್ಲಬ್ನಿಂದ ಸಹಾಯ ಒದಗಿಸುತ್ತಿದ್ದೇವೆ ಎಂದರು. ಲಯನ್ಸ್ ಕ್ಲಬ್ ಅಧ್ಯಕ್ಷ ಗಣೇಶ ಬಿಷ್ಠಣ್ಣನವರ್, ಕ್ಲಬ್ನ ಸಾಮಾಜಿಕ ಸೇವೆ ನಿರಂತರ ಮುಂದುವರಿಯಲಿದೆ ಎಂದು ಹೇಳಿದರು. ಕ್ಲಬ್ನ ವಲಯಾಧ್ಯಕ್ಷ ಡಾ ಸಂದೀಪ ಅಣ್ವೇಕರ್, ಕುರ್ಚಿಗಳನ್ನು ದಾನ ನೀಡಿದ ನಾರಾಯಣ ಕದಂ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಬಿಜಿವಿಎಸ್ ಅಧ್ಯಕ್ಷ ಪ್ರಭಾಕರ ರಾಣೆ, ಲಯನ್ಸ್ ಕ್ಲಬ್ ಕೊಡುಗೆಯನ್ನು ಶ್ಲಾಘಿಸಿದರು. ಸದಾಶಿವಗಡ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗಾಗಿ ರು. 10 ಸಾವಿರ ನೆರವು ನೀಡಲು ವಾಗ್ದಾನ ಮಾಡಲಾಯಿತು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಮುಖ್ಯಾಧ್ಯಾಪಕ ಸತೀಶ ರಾಣೆ ಸ್ವಾಗತಿಸಿದರು. ಶಿಕ್ಷಕಿ ವೀಣಾ ನಾಯ್ಕ ನಿರೂಪಿಸಿದರು. ದೈಹಿಕ ಶಿಕ್ಷಕ ಸುಧೀರ ದೇಸಾಯಿ ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.