ಸಿಇಟಿ ತರಬೇತಿ ಶಿಬಿರ
ಭಟ್ಕಳ: ನಾಮಧಾರಿ ಸೇವಾ ಸಂಘ ಭಟ್ಕಳ ಹಾಗೂ ಚೇತನಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಭಟ್ಕಳ ಸಂಯುಕ್ತಾಶ್ರಯದಲ್ಲಿ ಡಿ.ಎಡ್. ಪದವೀದರರಿಗೆ ಫೆ. 13ರಿಂದ ಒಂದು ತಿಂಗಳ ಕಾಲ ಉಚಿತ ಸಿಇಟಿ ತರಬೇತಿ ಶಿಬಿರವನ್ನು ಇಲ್ಲಿಯ ಸಿದ್ಧಾರ್ಥ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನ ಮಧ್ಯಾಹ್ನ 3ರಿಂದ ಸಂಜೆ 6ರ ತನಕ ತರಬೇತಿ ನಡೆಯಲಿದೆ. ಆಸಕ್ತರು ಶ್ರೀಧರ ನಾಯ್ಕ ದೂ-9743262671, ಎಸ್.ಎಂ.ನಾಯ್ಕ-9448797133, ರವಿ ನಾಯ್ಕ- 9242167628, ಆಶೀರ್ವಾದ ಬುಕ್ ಸೆಂಟರ್-9980431987 ಇಲ್ಲಿಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಗಣೇಶ ಜಯಂತಿ
ಅಂಕೋಲಾ: ಅವರ್ಸಾ ಗ್ರಾಮದ ಶ್ರೀ ಆದಿಗಣಪತಿ ದೇವಸ್ಥಾನದಲ್ಲಿ ಮಾಘ ಶುದ್ಧ ಗಣೇಶ ಜಯಂತಿ ಅಂಗವಾಗಿ ಫೆ. 13ರಂದು ಗಣಹೋಮ ಹಾಗೂ ಸತ್ಯಗಣಪತಿ ವ್ರತ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿವೆ. ಅಂದು ಮುಂಜಾನೆ 10 ಗಂಟೆಯಿಂದ ಕಾರ್ಯಕ್ರಮ ಪ್ರಾರಂಭ. ಅಪರಾಹ್ನ 1.15ಕ್ಕೆ ಪೂರ್ಣಾಹುತಿ, 1.30ಕ್ಕೆ ಮಂಗಳಾರತಿ, ಅನಂತರ ಪ್ರಸಾದ ವಿತರಣೆ ಹಾಗೂ ಸಂಜೆ 6 ಘಂಟೆಗೆ ಭಜನೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಆದಿಗಣಪತಿ ದೇವಸ್ಥಾನ ಅಭಿವೃದ್ಧಿ ಸಮಿತಿ ಪ್ರಕಟಣೆ ತಿಳಿಸಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.