ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉತ್ತರ ಕನ್ನಡ

3.5 ಲಕ್ಷ ಗ್ರಾಹಕರ ಹೊಂದುವ ಗುರಿ

Parashurama
Updated On : 12 Feb 2013, 11:37 am

ಶಿರಸಿ: ಗ್ರಾಹಕರಿಗೆ ವಿಶೇಷ ಸೌಲಭ್ಯ ಒದಗಿಸುವ ಜೊತೆಯಲ್ಲಿ 2013ರಲ್ಲಿ 70 ಸಾವಿರ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಮೂರೂವರೆ ಲಕ್ಷ ಗ್ರಾಹಕರನ್ನು ಹೊಂದುವ ಗುರಿ ಇರಿಸಿಕೊಂಡಿದ್ದೇವೆ ಎಂದು ಕರ್ನಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ಮಹಾಬಲೇಶ್ವರ ಭಟ್ಟ ತಿಳಿಸಿದರು.
ಅವರು ಸೋಮವಾರ ನಗರದ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಬ್ಯಾಂಕ್ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಈ ಕುರಿತಂತೆ ಕೆಪಿಎಂಜಿ ಬ್ಯಾಂಕಿಂಗ್ ಕನ್ಸಲ್ಟಂಟ್ ಜೊತೆಯಲ್ಲಿ ಬಿಜಿನೆಸ್ ಪ್ರೊಸೆಸಿಂಗ್ ಕುರಿತಂತೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಹೇಳಿದರು.
ದೇಶದಲ್ಲಿ ಫೆ. 18ಕ್ಕೆ ಕರ್ನಾಟಕ ಬ್ಯಾಂಕ್ 524 ಶಾಖೆಗಳನ್ನು ಮತ್ತು 476 ಎಟಿಎಂ ಸೇವಾ ಕೇಂದ್ರವನ್ನು ಆರಂಭಿಸಲಿದೆ. ಒಟ್ಟೂ 1000 ಬ್ಯಾಂಕಿನ ಸೇವಾ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಈಗಾಗಲೇ 20 ರಾಜ್ಯಗಳಲ್ಲಿ ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 2 ಶಾಖೆಗಳನ್ನು ಹೊಂದಿದೆ. ಮಾರ್ಚ್ 15ರೊಳಗಡೆ ಬ್ಯಾಂಕಿನ ವಹಿವಾಟನ್ನು ರು. 1 ಲಕ್ಷ ಕೋಟಿಗಳಿಗೆ ತಲುಪಿಸಲು ನಿರ್ಧರಿಸಲಾಗಿದೆ. ನೆಟ್ ಬ್ಯಾಕಿಂಗ್, ಮೊಬೈಲ್  ಬ್ಯಾಂಕಿಂಗ್ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲು ಈಗಾಗಲೇ ಯೋಜನೆ ಸಿದ್ಧಗೊಂಡಿದೆ ಎಂದು ಮಹಾಬಲೇಶ್ವರ ಭಟ್ಟ ಬ್ಯಾಂಕಿನ ಕಾರ್ಯಚಟುವಟಿಕೆ ಕುರಿತು ಮಾಹಿತಿ ನೀಡಿದರು.
ಕೃಷಿ ವಲಯಕ್ಕೆ ಆದ್ಯತೆ: ಗುಣಮಟ್ಟದ ಸೇವೆ ನೀಡುವಲ್ಲಿ ವಿಶೇಷ ಆಸಕ್ತಿ ವಹಿಸಲಾಗುತ್ತಿದೆ. ಕೃಷಿ ವಲಯಕ್ಕೆ ಶೇ. 18ರಷ್ಟು ಆದ್ಯತೆ ನೀಡಬೇಕೆಂದು ನಿಯಮಾವಳಿಯಲ್ಲಿದೆ. ನಮ್ಮ ಬ್ಯಾಂಕ್ ಶೇ. 15ರ ಗಡಿ ತಲುಪಿದೆ. ಅದೇ ರೀತಿ ಮಧ್ಯಮ ಮತ್ತು ದೊಡ್ಡ ಉದ್ದಿಮೆಗಳಿಗೂ ಸಾಲ ನೀಡಿಕೆಯಲ್ಲಿ ಆದ್ಯತೆ ನೀಡಲಾಗಿದೆ. ವಾಹನ ಸಾಲ, ಗೃಹ ಸಾಲಗಳಿಗೆ ಯಾವುದೇ ಪರಿಷ್ಕರಣಾ ಶುಲ್ಕ ಆಕರಿಸುವುದಿಲ್ಲ. 24್ಗ7 ಗ್ರಾಹಕ ಸೇವೆಗೆ ಸನ್ನದ್ಧವಾಗಿದೆ. 2013ರಲ್ಲಿ ಬ್ಯಾಂಕಿನ ಶಾಖೆಗಳನ್ನು 550ಕ್ಕೆ ಮತ್ತು ಎಟಿಎಂ ಸೇವಾಕೇಂದ್ರಗಳನ್ನು 500ಕ್ಕೆ ತಲುಪಿಸಲು ಕಾರ್ಯೋನ್ಮುಖರಾಗುತ್ತಿದ್ದೇವೆ ಎಂದು ವಿವರಿಸಿದರು.
ಕಳೆದ ವರ್ಷ ಬ್ಯಾಂಕ್ ರು. 246 ಕೋಟಿ ಲಾಭ ಗಳಿಸಿದ್ದು, 2012ರ ಡಿಸೆಂಬರ್ ಅಂತ್ಯಕ್ಕೆ ರು. 296 ಕೋಟಿ ಲಾಭ ಗಳಿಕೆಯಾಗಿದೆ. 2013 ಮಾರ್ಚ್ ಅಂತ್ಯಕ್ಕೆ ಲಾಭಾಂಶ ರು. 350 ಕೋಟಿಗೆ ತಲುಪುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಶಿಕ್ಷಣ, ಧಾರ್ಮಿಕ ಚಟುವಟಿಕೆ, ಗೋಸಂರಕ್ಷಣಾ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಯಂತ್ರಗಳ ಪೂರೈಕೆ ಹಾಗೂ ಪರಿಸರ ಪೂರಕ ಚಟುವಟಿಕೆಗೆ ಸಹಯೋಗ ನೀಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕಿನ ಸ್ಥಳೀಯ ಶಾಖೆಯ ವ್ಯವಸ್ಥಾಪಕ ಶ್ರೀಧರ ಹೆಗಡೆ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments