ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉತ್ತರ ಕನ್ನಡ

50 ಲಕ್ಷ ಟನ್ ಕಬ್ಬು ನುರಿಕೆ

Parashurama
Updated On : 12 Feb 2013, 11:37 am

ಹಳಿಯಾಳ:  ಇಐಡಿ ಪ್ಯಾರಿ ಶುಗರ್ಸ್‌ನಿಂದ ಈಗಾಗಲೆ 1.56 ಲಕ್ಷ ಟನ್ ಕಬ್ಬನ್ನು ಸ್ಥಳೀಯರಿಂದ ತೆಗೆದುಕೊಳ್ಳಲಾಗಿದ್ದು ಇನ್ನುಳಿದ 50 ಲಕ್ಷ ಟನ್ ಕಬ್ಬನ್ನು ಈ ತಿಂಗಳೊಳಗಾಗಿ ತೆಗೆದುಕೊಂಡು ಪೂರ್ಣಗೊಳಿಸಲಾಗುವುದು ಎಂದು ಪ್ಯಾರಿ ಶುಗರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಟಿ. ಕಣ್ಣನ್ ತಿಳಿಸಿದರು. ಅವರು ತಮ್ಮ ಕಚೇರಿಯಲ್ಲಿ ಬುಧವಾರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿ, ಕೆಲ ದಿನಗಳಿಂದ ತಮ್ಮ ಕಾರ್ಖಾನೆ ವಿರುದ್ಧ ಕೆಲ ಮುಖಂಡರು ಆರೋಪ ಮಾಡಿ ಸ್ಥಳೀಯ ರೈತರನ್ನು ನಿರ್ಲಕ್ಷಿಸಿದ್ದಾರೆ ಎಂಬ ಹೇಳಿಕೆಯನ್ನು ಅಲ್ಲಗಳೆದರು. ಮಳೆ ವಾತಾವರಣ ಸಂದರ್ಭದಲ್ಲಿ ಕಬ್ಬು ಕಟಾವಿಗೆ ಅನುಕೂಲಕರವಾಗಿಲ್ಲದ ಕಾರಣ ಒಂದೆರಡು ತಿಂಗಳು ವಿಳಂಬವಾಗಿದ್ದು ಕೆಲ ರೈತರಿಗೆ ತೊಂದರೆ ಉಂಟಾಗಿದ್ದು ನಿಜ. ಈಗಾಗಲೇ ಹೆಚ್ಚಿನ ಕಬ್ಬನ್ನು ನುರಿಸಿದ್ದು, ಇನ್ನುಳಿದ ಕಬ್ಬನ್ನು ನುರಿಸುವವರೆಗೆ ಯಾವುದೇ ಕಾರಣಕ್ಕೂ ಕಾರ್ಖಾನೆ ಸ್ಥಗಿತಗೊಳಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದರು. ನಮ್ಮ ಕಾರ್ಖಾನೆಯಿಂದ ಈ ವರ್ಷ 7 ಲಕ್ಷ ಟನ್‌ಗಿಂತ ಹೆಚ್ಚಿನ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಈ ತಿಂಗಳ ಅಂತ್ಯದವರೆಗೆ 6 ಲಕ್ಷ ಟನ್ ಕಬ್ಬು ಮಾತ್ರ ನುರಿಸಲು ಸಾಧ್ಯವಾಗಿದ್ದು, ಈ ಭಾಗದ ರೈತರು ಮತ್ತು ಮುಖಂಡರುಗಳು ಕಾರ್ಖಾನೆ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕು. ಸಹಕಾರ ನೀಡಬೇಕೆಂದರು. 3-4 ವರ್ಷದ ಅಂಕಿ- ಸಂಖ್ಯೆಯನ್ನು ನೀಡಿ ಈ ಭಾಗದ ಕಬ್ಬು ಬೆಳೆಗಾರರ ಸಂಖ್ಯೆ ಹಾಗೂ ಕ್ಷೇತ್ರ ವಿಸ್ತರಿಸಿದ್ದು, ಕ್ಷೇತ್ರದ ಸುತ್ತಲಿನ ಕಾರ್ಖಾನೆ ವ್ಯಾಪ್ತಿಯ ಧಾರವಾಡ ತಾಲೂಕು, ಅಳ್ನಾವರ, ಕಲಘಟಗಿ, ಮುಂಡಗೋಡ ಭಾಗದ ರೈತರ ಅನುಕೂಲಗಳನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments