ಇಂದಿನ ಕಾರ್ಯಕ್ರಮಗಳು
ಫೆ. 12ರ ಬೆಳಗ್ಗೆ 6ಕ್ಕೆ ಪಟ್ಟಾಭಿಷೇಕ ಕಾರ್ಯಕ್ರಮ ಪ್ರಾರಂಭ. ಬೆಳಗ್ಗೆ 6 ಗಂಟೆಯಿಂದ ಮಠದ ಬಸದಿಯಲ್ಲಿ 1008 ನೇಮೀನಾಥ ತೀರ್ಥಂಕರರಿಗೆ ನವಕಲಶಾಭಿಷೇಕ ಪೂಜೆ, ಗಣಧರವಲಯ ಯಂತ್ರಾರಾಧನೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಪೂರ್ವ ಪಟ್ಟಾಚಾರ್ಯರ ನಿಷಧಿಗೆ ಪುಷ್ಪ ಸಮರ್ಪಣೆ ನೆರವೇರಲಿದೆ. ಸಂಜೆ 6ಕ್ಕೆ ಭ.ಶ್ರೀ ನೇಮೀನಾಥ ತೀರ್ಥಂಕರರ ಯಕ್ಷಿ ಕೂಷ್ಮಾಂಡಿನಿ ದೇವಿಯವರಿಗೆ ಶತಾಷ್ಟನಾಮಾವಳಿ ಸಹಿತ ಕುಂಕುಮಾರ್ಚನೆ, ಷೋಡಶೋಪಚಾರ ಪೂಜೆ ನಡೆಯಲಿದೆ. ನಂತರ ಮಹಾಮಂಗಳರಾತಿ ಹಾಗೂ ಪ್ರಸಾದ ವಿನಿಯೋಗ ನಡೆಯುತ್ತದೆ.
ಆಗಬೇಕಾದದ್ದು?
ಮಠದ ಸುತ್ತಮುತ್ತ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ. ಭಕ್ತರ ತಂಗುವಿಕೆಗೆ ಯಾತ್ರಿ ನಿವಾಸ ನಿರ್ಮಾಣವಾಗಬೇಕಿದ್ದು, ಪ್ರವಾಸೋದ್ಯಮ ಇಲಾಖೆಗೆ ಮನವಿಯನ್ನೂ ಮಾಡಿಕೊಳ್ಳಲಾಗಿದ್ದು, ಇಲಾಖೆಯಿಂದ ಸಕಾರಾತ್ಮಕ ಉತ್ತರ ಲಭ್ಯವಾಗಿದೆ ಎಂದು ಮಠದ ಉಸ್ತುವಾರಿಗಳು ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಮಠದ ಹೊಸ ಕಟ್ಟಡ ನಿರ್ಮಾಣವಾಗಬೇಕಿದೆ. ಮಠದ ವತಿಯಿಂದ ಮಠದ ಆವರಣದಲ್ಲಿ ಶಾಲೆ, ತರಬೇತಿ ಶಿಬಿರವನ್ನು ನಡೆಸುವ ಕೇಂದ್ರ, ಭಕ್ತರಿಗಾಗಿ ಸ್ನಾನಗೃಹ, ಭೋಜನಾಲಯ ನಿರ್ಮಾಣವಾಗಬೇಕಿದೆ. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆ, ವಾಚನಾಲಯ, ಶೌಚಾಲಯವನ್ನು ಮುಂದಿನ ದಿನಗಳಲ್ಲಿ ಕಟ್ಟುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ ಎಂದು ಮಠದ ಮೇಲುಸ್ತುವಾರಿ ನೋಡಿಕೊಳ್ಳುವವರು ತಿಳಿಸುತ್ತಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.