ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉತ್ತರ ಕನ್ನಡ

ಕಾಳಿ ನದಿಗೆ ಸೇತುವೆ ನಿರ್ಮಿಸಿ

Parashurama
Updated On : 12 Feb 2013, 11:51 am

ಕಾರವಾರ:  ತಾಲೂಕಿನ ಕದ್ರಾ ಗ್ರಾಪಂ ವ್ಯಾಪ್ತಿಯಲ್ಲಿ ಕಾಳಿ ನದಿಗೆ ಸೇತುವೆ ನಿರ್ಮಿಸಬೇಕೆಂದು ಆಗ್ರಹಿಸಿ ಈಚೆಗೆ ಕದ್ರಾ ಜಿಪಂ ಮತ್ತು ಗ್ರಾಪಂ ಸದಸ್ಯರು ಜಿಲ್ಲಾಧಿಕಾರಿಗಳ ಮೂಲಕ ಮೀನುಗಾರಿಕಾ ಸಚಿವರಿಗೆ ಮನವಿ ಸಲ್ಲಿಸಿದರು.
ಕದ್ರಾ ಬಸ್ ನಿಲ್ದಾಣದಿಂದ ಕುರ್ನಿಪೇಟ್ ಬಂದರು ರಸ್ತೆಗೆ ಸಂಪರ್ಕ ಕಲ್ಪಿಸುವ ಕಾಳಿ ನದಿಗೆ ಸೇತುವೆಯನ್ನು ನಿರ್ಮಾಣ ಮಾಡಲು ಎನ್‌ಪಿಸಿ ಕೈಗಾದವರು ಈ ಹಿಂದೆ ಸಮೀಕ್ಷೆಯನ್ನು ಕೈಗೊಂಡಿದ್ದರು. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿರಾಶ್ರಿತರು ವಾಸವಾಗಿದ್ದಾರೆ. ಕಾಳಿ ನದಿಗೆ ಸೇತುವೆ ನಿರ್ಮಿಸಬೇಕೆಂಬುದು ಸಾರ್ವಜನಿಕರ ಬೇಡಿಕೆ. ಬಿರ್ಕೂಲ್, ಕುಂಬ್ರಿ, ಸುಳಿಗೇರಿ, ಬಾಳೆಮನೆ, ರಾಜೀವ ನಗರ, ಕದ್ರಾ ಕೆಪಿಸಿ, ಹರ್ಟುಗಾ, ಕುಚೇಗಾರ, ಯಲ್ಲಾಪುರ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಜೋಯಿಡಾ, ರಾಮನಗರ ಕಡೆಗೆ ಹೋಗಲು ಅನುಕೂಲ ಕಲ್ಪಿಸುವ ಮುಖ್ಯ ಸೇತುವೆಯಾಗುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಹೋರಾಟದ ಎಚ್ಚರಿಕೆ: ಕದ್ರಾ ಅಣೆಕಟ್ಟಿನಿಂದ 2 ಕಿ.ಮೀ. ಅಂತರವಿದೆ. ಕದ್ರಾ ಬಸ್ ನಿಲ್ದಾಣದಿಂದ ಕುರ್ನಿಪೇಟ್ ಬಂದರು ರಸ್ತೆಗೆ ಸಂಪರ್ಕ ಕಲ್ಪಿಸುವ ಕಾಳಿ ನದಿಗೆ ಸೇತುವೆ ನಿರ್ಮಿಸಿದರೆ ಯಾವುದೇ ತೊಂದರೆ ಆಗುವುದಿಲ್ಲ. ಸೇತುವೆ ನಿರ್ಮಿಸಲು ಯಾವುದೇ ಕಾರಣಕ್ಕೂ ಸ್ಥಳ ಬದಲಾವಣೆ ಮಾಡಬಾರದಾಗಿ ಗ್ರಾಪಂ ಸಭೆಯಲ್ಲಿ ಗ್ರಾಮಸ್ಥರು ಬೇಡಿಕೆ ಮಂಡಿಸಿದ್ದಾರೆ. ಆದರೆ ಎನ್‌ಪಿಸಿ ನಿಗಮ, ಕಾರವಾರದ ಸಹಾಯಕ ಕಮೀಷನರ್ ಮತ್ತು ತಹಸೀಲ್ದಾರ್ ಬೋರೆಯಿಂದ ಮಲ್ಲಾಪುರದ ತನಕ ಕಾಳಿ ಸೇತುವೆ ಸಮೀಕ್ಷಾ ಕಾರ್ಯವನ್ನು ಮಾಡಲು ಬಂದಾಗ ಸಾರ್ವಜನಿಕರ ಹಾಗೂ ಕದ್ರಾ ಗ್ರಾಪಂ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೋರೆಯಲ್ಲಿ ಕಾಳಿ ನದಿಗೆ ಸೇತುವೆ ನಿರ್ಮಿಸಿದ್ದಲ್ಲಿ ಖಾಸಗಿ ಜಮೀನು ಹಾಳಾಗುವುದಲ್ಲದೇ ಅರಣ್ಯ ಜಾಗ ಭೂಸ್ವಾಧೀನ ಮಾಡಬೇಕಾಗುತ್ತದೆ. ಒಂದು ವೇಳೆ ಕದ್ರಾ ಬಸ್ ನಿಲ್ದಾಣದಿಂದ ಕುರ್ನಿಪೇಟ್ ಬಂದರು ರಸ್ತೆ ಹೊರತು ಪಡಿಸಿ ಬೇರೆಡೆ ಸ್ಥಳ ಬದಲಾವಣೆ ಮಾಡಿದ್ದಲ್ಲಿ ಆಕ್ರೋಶ ವ್ಯಕ್ತ ಪಡಿಸಿ ಹೋರಾಟ ಮಾಡುವುದಾಗಿ ಸಾರ್ವಜನಿಕರು ನಿರ್ಧರಿಸಿದ್ದಾರೆ ಎಂದು ವಿವರಿಸಲಾಗಿದೆ. ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಶಾಂತಾ ಬಾಂದೇಕರ, ಕದ್ರಾ ಗ್ರಾಪಂ ಸದಸ್ಯರಾದ ಆಗ್ನೇಲ್ ರೊಡ್ರಿಗಸ್, ಶ್ಯಾಮನಾಥ ನಾಯ್ಕ, ದಿನೇಶ್ ಮಾರಿಮುತ್ತು ಶೆಟ್ಟಿ, ಗುರುದಾಸ ಶೇಟ್, ಸಂಜಯ್ ಗೌಡ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments