ಗೋಕರ್ಣ ಉತ್ಸವ ಪೂರ್ವ ತಯಾರಿ
ಗೋಕರ್ಣ: ಇದೇ ಪ್ರಥಮ ಬಾರಿಗೆ ಗೋಕರ್ಣ ಯುತ್ ಆರ್ಗನೈಜೇಶನ್ ಅಡಿ ಹಮ್ಮಿಕೊಳ್ಳಲಾಗುತ್ತಿರುವ ಗೋಕರ್ಣ ಉತ್ಸವ-2013ರ ಪೂರ್ವ ತಯಾರಿಗೆ ಅದ್ಧೂರಿಯಾಗಿ ಚಾಲನೆ ದೊರೆತಿದ್ದು, ಇಲ್ಲಿಯ ರಥಬೀದಿಯಲ್ಲಿ ಉತ್ಸವ ಸಮಿತಿ ಕಾರ್ಯಾಲಯಕ್ಕೆ ಉತ್ಸವ ಸಮಿತಿ ಅಧ್ಯಕ್ಷ ಯಶೋಧರ ನಾಯ್ಕ ಚಾಲನೆ ನೀಡಿದರು. ಯುತ್ ಆರ್ಗನೈಜೇಶನ್ ಅಧ್ಯಕ್ಷ ರಾಜಗೋಪಾಲ ಅಡಿ, ಪಾಶ್ಚಾತ್ಯ ಹಾಗೂ ಹಿಂದೂ ಸಂಸ್ಕೃತಿಯ ಅಪೂರ್ವ ಸಂಗಮವಾದ ಈ ಕ್ಷೇತ್ರದಲ್ಲಿ ಪ್ರಪ್ರಥಮವಾಗಿ 3 ದಿನಗಳ ಕಾಲ ಉತ್ಸವವನ್ನು ಆಚರಿಸಲಾಗುತ್ತಿದ್ದು ಎಲ್ಲರಿಂದಲೂ ಎಲ್ಲ ರೀತಿಯ ಸಹಕಾರ ಮತ್ತು ತೊಡಗಿಸುಕೊಳ್ಳುವಿಕೆಯಿಂದ ಇದನ್ನು ಯಶಸ್ವಿಗೊಳಿಸಲು ಸಾಧ್ಯ ಎಂದರು. ಗೋಕರ್ಣ ಗ್ರಾಪಂ ಅಧ್ಯಕ್ಷ ಮತ್ತು ಉತ್ಸವ ಸಮಿತಿ ಉಪಾಧ್ಯಕ್ಷ ಮಂಜುನಾಥ ಜನ್ನು, ಗೋಕರ್ಣ ಜಿಲ್ಲಾ ಪಂಚಾಯಿತಿ ಸದಸ್ಯ ಮತ್ತು ಸಮಿತಿಯ ಪ್ರದೀಪ ನಾಯಕ, ಉಳಿದಿರುವ ಅಲ್ಪ ಸಮಯದಲ್ಲಿ ಹೆಚ್ಚಿಗೆ ಶ್ರಮವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಒಟ್ಟಿಗೆ ಕೈ ಜೋಡಿಸಬೇಕಿದೆ ಎಂದು ನುಡಿದರು. ಉತ್ಸವ ಸಮಿತಿ ಸಂಚಾಲಕ ಅರುಣ ನಾಯ್ಕ ತದಡಿ, ಆನಂದು ಕವರಿ, ಮೋಹನ ನಾಯಕ, ಪಾರ್ವತಿ ನಾಯ್ಕ ಮೊದಲಾದವರು ಮಾತನಾಡಿ, ಎಲ್ಲರು ತನು-ಮನ-ಧನದ ಸಹಕಾರ ನೀಡಬೇಕಾಗಿದೆ ಎಂದರು. ಉತ್ಸವದ ಬಗ್ಗೆ ಮಾಹಿತಿ ಮತ್ತು ಸಹಕಾರಕ್ಕಾಗಿ ಈ ದೂರವಾಣಿ ಸಂಖ್ಯೆಯನ್ನು 8088041780 ಸಂಪರ್ಕಿಸಬೇಕು. ಕಾರ್ಯದರ್ಶಿ ನಾಗೇಂದ್ರ ಎಸ್. ಶೇಟ್ ವಂದಿಸಿದರು. ಪ್ರಮುಖರಾದ ಗೌರೀಶ ಕಲಗುಜ್ಜಿ, ಕುಮಾರ ಜೋಗಭಟ್ಟ, ಗಣಪತಿ ಗೌಡ, ಶ್ರೀಧರ ಗೌಡ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ನಾಥಾಲ ರೆಬೆಲ್ಲೋ, ಗಜಾನನ ಶೆಟ್ಟಿ, ಮಹಾಲಕ್ಷ್ಮೀ ಭಡ್ತಿ, ರತ್ನಾ ಗೌಡ, ಯುತ್ ಆರ್ಗನೈಜೇಶನ್ನ ಸೂರಜ್ ಭಟ್ಟ, ಸಾಗರ ನಾಯ್ಕ, ಅರುಣ ಗೌಡ, ಸತೀಶ ನಾಯ್ಕ, ಸಂತೋಷ ನಾಯಕ, ರವಿ ಆಚಾರಿ, ರವಿ ಹೊಸ್ಕಟ್ಟಾ, ವಿಜಯ ಹೊಸ್ಕಟ್ಟಾ, ಗಣೇಶ ಗಿರಿಯನ್, ವೆಂಕಟ್ರಮಣ ಗೌಡ, ಪವನ ಉಪಾಧ್ಯಾಯ, ಸಂತೋಷ ರೆಬೆಲ್ಲೋ, ಗಣೇಶ ಜೋಗಳೇಕರ, ವಿಶ್ವನಾಥ ಗೋಪಿ, ಅನೀಲ ರೆಬೆಲ್ಲೋ ಸೇರಿದಂತೆ ನೂರಾರು ನಾಗರಿಕರು ಯುವಕರು ಉಪಸ್ಥಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.